ನವದೆಹಲಿ :  ದೇಶದ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಅಲ್ಲದೇ ಈಗಾಗಲೇ ಅನೇಕ ಪಕ್ಷಗಳೂ ಬಿಜೆಪಿಯಿಂದ ಹಿಂದೆ ಸರಿದಿದ್ದು, ಮತ್ತೊಂದಿಷ್ಟು ಶಾಕ್ ನೀಡಿದಂತಾಗಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಬಿಜೆಪಿ ನೇತೃತ್ವದ NDA ಗೆ ಒಂದರ ಮೇಲೊಂದು ಶಾಕ್ ಎದುರಾಗುತ್ತಿದೆ.  ಇತ್ತೀಚೆಗಷ್ಟೇ ಬಿಜೆಪಿ ಮಿತ್ರಪಕ್ಷವಾಗಿದ್ದ RLSP ಉಪೇಂದ್ರ ಕುಶ್ವಾ ಕೂಡ  NDA ಯೊಂದಿಗಿನ ಮೈತ್ರಿ ಕಳೆದುಕೊಂಡು ಮಹಾಘಟಬಂಧನ್ ಜೊತೆ ಕೈ ಜೋಡಿಸಿದ್ದಾರೆ. 

ಈ ನಡುವೆ ಬಿಜೆಪಿ ಮುಖಂಡರೋರ್ವರು ದಕ್ಷಿಣದಲ್ಲಿ ಪಕ್ಷವೊಂದು NDAಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಿದ್ದಾರೆ. 2019ನೇ ಸಾಲಿನ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಳ್ಳುತ್ತಿದೆ ಎನ್ನುವ ಸುಳಿವೊಂದನ್ನು ನೀಡಿದ್ದಾರೆ. 

ತೆಲಂಗಾಣ ರಾಜಕೀಯಕ್ಕೆ ಬಿಜೆಪಿ ಶಾಸಕ ಲಿಂಬಾವಳಿ ಎಂಟ್ರಿ

 

ಬಿಹಾರದಲ್ಲಿ ಈಗಾಗಲೇ ಸೀಟು ಹಂಚಿಕೆ ಬಗ್ಗೆ ನಿರ್ಧಾರಿಸಲಾಗಿದೆ. ಇದೀಗ ತಮ್ಮ ಬಣಕ್ಕೆ ಇನ್ನೊಂದು ಪಕ್ಷ ಸೇರುತ್ತಿದೆ ಎಂದು ಹಿರಿಯ ಬಿಜೆಪಿ ಮುಖಂಡ ರಾಮ ಮಾದವ್ ಸುಳಿವು ನೀಡಿದ್ದಾರೆ.

ಇದರಿಂದ ಈಗಾಗಲೇ ಆಂಧ್ರ ಪ್ರದೇಶದ ಟಿಡಿಪಿ, RLSP ಪಕ್ಷವನ್ನು ಕಳೆದುಕೊಂಡ ಬಿಜೆಪಿ ಕೊಂಚ ಶಕ್ತಿ ದೊರೆತಂತಾಗಲಿದೆ. ಆದರೆ ಮೈತ್ರಿ ಸಿದ್ಧವಾಗಿರುವ ಪಕ್ಷದ ಬಗ್ಗೆ ಬಿಜೆಪಿ ಮುಖಂಡರು ಯಾವ ಸುಳಿವನ್ನೂ ನೀಡಿಲ್ಲ.