ಲಕ್ನೋ,[ಫೆ.17] : ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ಗುರುವಾರ ನಡೆದ ದಾಳಿಯಲ್ಲಿ ಹುತಾತ್ಮರಾದ ಉತ್ತರ ಪ್ರದೇಶದ ಮೂಲದ ಯೋಧ ಅಜಿತ್ ಕುಮಾರ್ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನಗುತ್ತಾ ಜನರತ್ತ ಕೈ ಬೀಸಿ ಟೀಕೆಗೆ ಗುರಿಯಾಗಿದ್ದಾರೆ.

ಶನಿವಾರ ಬೆಳಗ್ಗೆ ಯೋಧ ಅಜಿತ್ ಕುಮಾರ್ ಪಾರ್ಥಿವ ಶರೀರವನ್ನು ಉನ್ನಾವೊದಲ್ಲಿರುವ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ನಡೆದ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದ ಸಾಕ್ಷಿ ಮಹಾರಾಜ್, ನೆರೆದಿದ್ದ ಜನರತ್ತ ನಗುತ್ತಾ ಕೈ ಬೀಸಿ ದುಃಖದ ನಡುವೆ ಸಂತೋಷವಾಗಿರುವಂತೆ ವರ್ತಿಸಿದ್ದಾರೆ.  ಸಂಸದರ ಈ ನಡೆಗೆ ಟ್ವಿಟರ್‌ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಹಲವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ.

ಪುಲ್ವಾಮ ದಾಳಿ : ಸೇನೆಯನ್ನೇ ಹೊಣೆ ಮಾಡಿದ ಮಾಜಿ ಕಾಂಗ್ರೆಸ್ ಸಂಸದೆ

ಸಾಕ್ಷಿ ಮಹಾರಾಜ್ ವರ್ತನೆ ಖಂಡಿಸಿ ಟ್ವೀಟ್ ಮಾಡಿರುವ ಸತೀಶ್ ಕುಮಾರ್ ಎಂಬವರು, “ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ರಾಜಕೀಯ ಅಸಹ್ಯ ಹುಟ್ಟಿಸಿದೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು. 

ಅವರು ಸಿಧು ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸಾಕ್ಷಿ ಮಹಾರಾಜ್ ಮಾಡಿದ್ದು ಅದಕ್ಕಿಂತಲೂ ಸಾವಿರ ಪಟ್ಟು ಕೆಟ್ಟ ಕೆಲಸ. ಇದು ಬಿಜೆಪಿಯ ರೋಡ್‌ಶೋ ಅಲ್ಲ. ಹುತಾತ್ಮ ಯೋಧನ ಅಂತಿಮಯಾತ್ರೆ ಎಂಬುದನ್ನು ಸಾಕ್ಷಿ ಮಹಾರಾಜ್‌ಗೆ ತಿಳಿಸಬೇಕು” ಎಂದು ಕಿಡಿಕಾರಿದ್ದಾರೆ.