ನವದೆಹಲಿ: ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. 44 ಯೊಧರು ವೀರಮರಣವನ್ನಪ್ಪಿದ್ದು, ಪ್ರತಿಕಾರದ ಕಿಚ್ಚು ಭಾರತೀಯರ ಹೃದಯದಲ್ಲಿ ಹೊತ್ತಿದೆ. 

ಆದರೆ ಮಾಜಿ ಕಾಂಗ್ರೆಸ್ ಸಂಸದೇ ನೂರ್ ಬಾನೋ ಹುತಾತ್ಮ ಯೋಧರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ್ದಾರೆ. 

ಗುಪ್ತಚರ ಸಂಸ್ಥೆಗಳಿಗೆ  ಉಗ್ರರ ದಾಳಿಯ ಬಗ್ಗೆ ಮೊದಲೇ ತಿಳಿದಿದ್ದು, ಈ ಬಗ್ಗೆ ಎಚ್ಚರಿಕೆಯನ್ನು ರವಾನಿಸಲಾಗಿತ್ತು. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

ಪಾಕ್‌ಗೆ ಯಾಕೆ ಬೈಬೇಕು ಎಂದ ಸಿದ್ದುಗೆ ಬೈಬಾರದ್ದು ಬೈದ್ರು!

ಎಚ್ಚರಿಕೆ ಸಂದೇಶದ ಬಳಿಕ ಎಚ್ಚೆತ್ತುಕೊಂಡಿದ್ದರೆ,  ದಾಳಿ ಆಗುತ್ತಿರಲಿಲ್ಲ ಎಂದು ನೂರ್ ಬಾನೂ ಹೇಳಿದ್ದಾರೆ. 

ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!

ಜೈಶ್  ಇ ಮೊಹಮ್ಮದ್ ಉಗ್ರ ಸಂಘಟನೆ ಕೈವಾಡ ಈ ದಾಳಿ ಹಿಂದೆ ಇದ್ದರೆ ಇಡೀ ಪಾಕಿಸ್ತಾನವನ್ನೇ ಏಕೆ ತೆಗಳಬೇಕು ಎಂದು ಹೇಳಿಕೆ ನೀಡಿದ್ದ ರಾಜಕಾರಣಿ ನವಜೋತ್ ಸಿಂಗ್ ಸಿಧು ಹೇಳಿಕೆ ಬೆನ್ನಲ್ಲೇ ಬಾನೂ ಹೇಳಿಕೆಯೂ ತೀವ್ರ ವಿವಾದಕ್ಕೆ ಕಾರಣವಾಗಿದೆ.