ಶಿವಮೊಗ್ಗ, (ಮೇ.06):  ನಿನ್ನೆ (ಭಾನುವಾರ) ಕುಂದಗೋಳದಲ್ಲಿ ನಾನು ವಡ್ಡ ಎಂದು ಪದ ಬಳಕೆ ಮಾಡಿದ್ದೆ. ಆದರೆ, ನಾನು ಯಾವುದೇ, ಜಾತಿಗೆ ಸೀಮಿತವಾಗಿ ಪದ ಬಳಕೆ ಮಾಡಿಲ್ಲ. ಬದಲಾಗಿ ನಾನು ಕಾಂಗ್ರೆಸ್ ನವರ ರೀತಿಯಲ್ಲಿ ಗಟ್ಟಿ ಎಂದು ಹೇಳುವ ನಿಟ್ಟಿನಲ್ಲಿ ನಾನು ಕೂಡ ವಡ್ಡ ಎಂದು ಹೇಳಿದ್ದೆ. ಬೋವಿ ಸಮಾಜದವರಿಗೆ ನಾನು ಬಳಸಿದ ಪದದಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.

ಶಿವಮೊಗ್ಗದಲ್ಲಿ ಇಂದು (ಸೋಮವಾರ)  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋವಿ ಸಮಾಜದವರು ನನ್ನ ಅಣ್ಣ ತಮ್ಮಂದಿರಿದ್ದಂತೆ. ನಮ್ಮ ಸರ್ಕಾರ ಇದ್ದಾಗ ಹಲವಾರು ಕೆಲಸಗಳನ್ನು ಮಾಡಿಕೊಟ್ಟಿದೆ.

ನನ್ನ ಹೇಳಿಕೆಯನ್ನು ತಿರುಚುವುದು ಬೇಡ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೆನೆ ಎಂದು ಸಮಜಾಯಿಸಿ ನೀಡಿದರು.

'ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಆದ್ರೆ ಏನ್ಮಾಡ್ತೀಯಾ'?: ನಾಲಿಗೆ ಹರಿಬಿಟ್ಟ ಈಶ್ವರಪ್ಪ

ಸಿಎಂ ವಿರುದ್ಧ ವಾಗ್ದಾಳಿ
ಮಾಧ್ಯಮಗಳಿಗೆ ಹುಷಾರ್ ಎಂದು ಸಿಎಂ ಹೇಳುತ್ತಿದ್ದಾರೆ. ಇಂದಿರಗಾಂಧಿ ಮಾಧ್ಯಮದ ಮೇಲೆ ಹಿಡಿತ ಸಾಧಿಸಲು ಹೊರಟು, ಅಧಿಕಾರ ಕಳೆದುಕೊಂಡಿದ್ದರು. ನೀವೂ ಕೂಡ ಅಧಿಕಾರ ಕಳೆದುಕೊಳ್ತಿರಾ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.

ನೀವು ಯಾವ ರೀತಿ ನಡೆದುಕೊಳ್ತೀರಾ ಅನ್ನೋದನ್ನ ಜನ ಗಮನಿಸ್ತಾ ಇದಾರೆ. ಮೇ 23 ನೇ ತಾರೀಖಿನ ನಂತರ ಯಾವುದೇ ಕಾರಣಕ್ಕೂ ಅಧಿಕಾರದಲ್ಲಿ ಉಳಿಯಲ್ಲ. ಸರ್ವಾಧಿಕಾರಿ ದಬ್ಬಾಳಿಕೆ ನಡೆಯೋದಿಲ್ಲ ಎಂದು ಲೇವಡಿ ಮಾಡಿದರು.

ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಲು ಹೊರಟಿರೋದು ತಪ್ಪು. ಈ ರೀತಿ ಮಾಧ್ಯಮದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.