ರಾಜಸ್ಥಾನ: ಹರ್ಯಾಣ ಬಿಜೆಪಿ ಮುಖಂಡನ ಪುತ್ರನೊಬ್ಬ ಐಏಎಸ್ ಅಧಿಕಾರಿಯೊಬ್ಬರ ಪುತ್ರಿಯನ್ನು ಹಿಂಬಾಲಿಸಿ ಅಪಹರಿಸಲು ಯತ್ನಿಸಿರುವ ಘಟನೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ರಾಜಸ್ಥಾನದ ಬಿಜೆಪಿ ಮುಖಂಡರೊಬ್ಬರ ಮೊಮ್ಮಗ ಹಣ ಸುಲಿಗೆ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದಾನೆ.

ಶ್ರೀ ಗಂಗಾನಗರ, ರಾಜಸ್ಥಾನ: ಹರ್ಯಾಣ ಬಿಜೆಪಿ ಮುಖಂಡನ ಪುತ್ರನೊಬ್ಬ ಐಏಎಸ್ ಅಧಿಕಾರಿಯೊಬ್ಬರ ಪುತ್ರಿಯನ್ನು ಹಿಂಬಾಲಿಸಿ ಅಪಹರಿಸಲು ಯತ್ನಿಸಿರುವ ಘಟನೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ರಾಜಸ್ಥಾನದ ಬಿಜೆಪಿ ಮುಖಂಡರೊಬ್ಬರ ಮೊಮ್ಮಗ ಹಣ ಸುಲಿಗೆ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದಾನೆ.

ರಾಜಸ್ಥಾನದ ಬಿಜೆಪಿ ಮುಖಂಡ ರಾಧೇ ಶ್ಯಾಮ್ ಎಂಬವರ ಮೊಮ್ಮಗ ಸಾಹಿಲ್ ರಾಜಪಾಲ್ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಕರೆಗಳನ್ನು ಮಾಡಿ ಹಣ ಸುಲಿಯುವ ದಂಧೆ ನಡೆಸುತ್ತಿದ್ದು ಈಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ.

ಅತ್ಯಾಧುನಿಕ ಸಾಫ್ಟ್’ವೇರ್’ಗಳನ್ನು ಬಳಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆದರಿಕೆ ಕರೆ ಮಾಡುವ ಗ್ಯಾಂಗ್ ನಡೆಸುತ್ತಿದ್ದ ಈತ ಭ್ರಷ್ಟಾಚಾರ ನಿಗ್ರಹ ದಳದ (ಏಸಿಬಿ) ಅಧಿಕಾರಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಯುತ್ತಿದ್ದನು ಎನ್ನಲಾಗಿದೆ.

ಏಸಿಬಿ ತನಿಖೆ ನಡೆಸುತ್ತಿದ್ದ ಪ್ರಕರಣಗಳನ್ನು ಮುಂದಿಟ್ಟುಕೊಂಡು, ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಪ್ರಕರಣದಲ್ಲಿ ಸಿಲುಕಿಸುವುದಾಗಿ ಈ ಗ್ಯಾಂಗ್ ಬೆದರಿಕೆಯೊಡ್ಡುತ್ತಿತ್ತು ಎಂದು ವರದಿಯಾಗಿದೆ.

ಚಿತ್ರಕೃಪೆ: ಏಎನ್ಐ