ರಾಜ್ಯ ರಾಜ್ಯ ರಾಜಕೀಯ ಹೈ ಡ್ರಾಮ ಜೋರಾಗುತ್ತಿದ್ದು, ರಾಜೀನಾಮೆ ಪರ್ವ ಹೆಚ್ಚುತ್ತಲೇ ಇದೆ. ಶಾಸಕರ ರಾಜೀನಾಮೆ ಬೆನ್ನಲ್ಲೇ ಮೈತ್ರಿ ಸರ್ಕಾರದ 19 ಸಚಿವರು ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಸಿಎಂ ಕುಮಾರಸ್ವಾಮಿ ರಾಜೀನಾಮೆಗೂ ಆಗ್ರಹಿಸಲಾಗಿದೆ. 

ಬೆಂಗಳೂರು (ಜು.08) : ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಹೈ ಡ್ರಾಮ ನಡೆಯುತ್ತಿದ್ದು, ಶಾಸಕರ ರಾಜೀನಾಮೆಯ 2 ದಿನಗಳಲ್ಲೇ 19 ಸಚಿವರು ರಾಜೀನಾಮೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಗೂ ಆಗ್ರಹಿಸಲಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. 

ನನ್ನ ಬೆಂಬಲ ಬಿಜೆಪಿಗೆ, ಪಕ್ಷೇತರ ಶಾಸಕ ನಾಗೇಶ್: ಬಿಜೆಪಿ ಬಲ 106ಕ್ಕೇರಿಕೆ!

ನಾಚಿಕೆ ಬಿಟ್ಟು ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ, ನಿರಂತರವಾಗಿ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ರಾಜೀನಾಮೆ ನೀಡುವವರನ್ನು ತಡೆಯಲು ಪರಮೇಶ್ವರ್ ಓಡಾಡುತ್ತಿದ್ದಾರೆ. ಅವರ ನಡೆಯೇ ಶಾಸಕರನ್ನು ಹೊಡೆಯುವಂತಿದೆ ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಡಿಸಿಎಂ ಪರಮೇಶ್ವರ್, ಡಿಕೆಶಿ ಸೇರಿ ಹಲವು ಸಚಿವರ ರಾಜೀನಾಮೆ: ಇಲ್ಲಿದೆ ಪಟ್ಟಿ