ದಲಿತ ಮಹಿಳೆಯರ ಮೇಲೆ ಮನಸೋ ಇಚ್ಛೆ ಹಲ್ಲೆ ಮತ್ತು ಅವರ ವಿರುದ್ಧ ಉತ್ತರಾಖಂಡ್‌ನ ಶಾಸಕನೋರ್ವ ಜಾತಿನಿಂದನೆ ಮಾಡಿದ್ದಾರೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ರುದ್ರಾಪುರ ಶಾಸಕ ರಾಜಕುಮಾರ್‌ ಠುಕರಲ್‌, ದಲಿತ ಮಹಿಳೆಯರಿಗೆ ಮನಸೋ ಇಚ್ಛೆ ಥಳಿಸುವ ಮತ್ತು ಜಾತಿ ನಿಂದನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

ರುದ್ರಾಪುರ(ಉತ್ತರಾಖಂಡ್‌): ದಲಿತ ಮಹಿಳೆಯರ ಮೇಲೆ ಮನಸೋ ಇಚ್ಛೆ ಹಲ್ಲೆ ಮತ್ತು ಅವರ ವಿರುದ್ಧ ಉತ್ತರಾಖಂಡ್‌ನ ಶಾಸಕನೋರ್ವ ಜಾತಿನಿಂದನೆ ಮಾಡಿದ್ದಾರೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ರುದ್ರಾಪುರ ಶಾಸಕ ರಾಜಕುಮಾರ್‌ ಠುಕರಲ್‌, ದಲಿತ ಮಹಿಳೆಯರಿಗೆ ಮನಸೋ ಇಚ್ಛೆ ಥಳಿಸುವ ಮತ್ತು ಜಾತಿ ನಿಂದನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಠುಕರಲ್‌ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗೆಳೆದಿರುವ ಬಿಜೆಪಿ ಮುಖಂಡ ಠುಕರಲ್‌, ‘ನನ್ನ ಘನತೆಗೆ ಮಸಿ ಬಳಿಯಲು ನನ್ನ ವಿರುದ್ಧ ಮಾಡಲಾದ ಪಿತೂರಿಯಿದು,’ ಎಂದು ಹೇಳಿದ್ದಾರೆ. ಶಾಸಕನಿಂದ ಥಳಿತಕ್ಕೊಳಗಾದ ಸಂತ್ರಸ್ತರ ಪರವಾಗಿ ರಾಮ್‌ ಕಿಶೋರ್‌ ಎಂಬುವರು ನೀಡಿದ ದೂರಿನ ಮೇರೆಗೆ ಶಾಸಕನ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಉಧಂ ಸಿಂಗ್‌ ನಗರದ ಹಿರಿಯ ಎಸ್‌ಪಿ ಸದಾನಂದ ದಾಟೆ ಹೇಳಿದ್ದಾರೆ.

ಕಳೆದ ಶುಕ್ರವಾರ ಶಾಸಕನ ಮನೆಯಲ್ಲಿ ಯುವಕ ಮತ್ತು ಯುವತಿಯ ಸಂಬಂಧದ ಬಗ್ಗೆ ಪಂಚಾಯ್ತಿ ಸಭೆ ನಡೆದಿತ್ತು. ಈ ವೇಳೆ ಹುಡುಗ ಮತ್ತು ಹುಡುಗಿಯ ಸಂಬಂಧಿಕರು ಕಾಯ್ದಾಟಕ್ಕೆ ಮುಂದಾದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಶಾಸಕ ಠುಕರಲ್‌, ಕೆಲ ಮಹಿಳೆಯರ ಮೇಲೆ ಹಲ್ಲೆ ಮಾಡಿದರು ಎಂದು ವರದಿಗಳು ತಿಳಿಸಿವೆ.