ಬೆಂಗಳೂರು(ಅ.05): ಮುಂದಿನ  ವಿಧಾನಸಭೆ ಚುನಾವಣೆಗೆ ಇನ್ನು  ಒಂದೂವರೆ ವರ್ಷಗಳು ಬಾಕಿಯಿರುವಂತೆಯೇ ಬಿಜೆಪಿ  ತನ್ನ  ಸಿಎಂ ಅಭ್ಯರ್ಥಿಯನ್ನು  ಪರೋಕ್ಷವಾಗಿ  ಘೋಷಿಸಿಕೊಂಡಿದೆ.

ನಿನ್ನೆ  ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ  ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್​,  ರಾಜ್ಯದ ಮುಂದಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು?  ನಾನೇ ಹೇಳಬೇಕೇ? ಅಥವಾ ನೀವೇ ಹೇಳುತ್ತೀರಾ? ಎಂದು ಸಭೆಯನ್ನುದ್ದೇಶಿಸಿದ ಮಾತಿಗೆ ನಿಂತಾಗ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಎಲ್ಲಾ 546 ಸದಸ್ಯರು ಯಡಿಯೂರಪ್ಪನವರೇ ಮುಂದಿನ  ಸಿಎಂ ಅಭ್ಯರ್ಥಿಯಾಗಲಿ  ಅಂತಾ ಒಕ್ಕೊರಲಿನಿಂದ ಆಗ್ರಹಿಸಿದ್ದರು. 

ಇದೇ ಸಭೆಯಲ್ಲಿ  ಮಾತನಾಡಿದ ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ದಿನದಿಂದ ಮನೆಗೆ ಹೋಗಿಲ್ಲ. ಬಿಜೆಪಿಯನ್ನು ಅಧಿಕಾರಕ್ಕೆ ತಂದ ನಂತರವೇ ಮನೆಗೆ ಮರಳುತ್ತೇನೆ ಎಂದು ಹೇಳಿದರು.