ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮದರ್, ಭಾನುಪ್ರಕಾಶ್  ಜೂನ್.17ರಂದು ನಿವೃತ್ತರಾಗುವ ಬಿಜೆಪಿ ಪರಿಷತ್ ಸದಸ್ಯರು. ಜೂನ್. 11ರಂದು ಚುನಾವಣೆ ನಡೆಯಲಿದ್ದು 11 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ನಿರಾಯಾಸವಾಗಿ ಬಿಜೆಪಿ ಗೆಲ್ಲಲಿದೆ.

ಬೆಂಗಳೂರು(ಮೇ.30): ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಐವರು ಅಭ್ಯರ್ಥಿಗಳನ್ನು ಫೈನಲ್'ಗೊಳಿಸಿದೆ.
ಎಸ್.ರುದ್ರೇಗೌಡ, ತೇಜಸ್ವಿನಿಗೌಡ, ರಘುನಾಥ್ ರಾವ್ ಮಲ್ಕಾಪುರೆ, ಕೆ.ಪಿ.ನಂಜುಂಡಿ, ಎನ್.ರವಿಕುಮಾರ್ ಹೆಸರನ್ನು ಬಿಜೆಪಿ ಸೂಚಿಸಿದೆ. ಐವರಲ್ಲಿ ರಘುನಾಥ್ ರಾವ್ ಮಲ್ಕಾಪುರೆ ಪುನರಾಯ್ಕೆ ಬಯಸಿದ್ದಾರೆ.
ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮದರ್, ಭಾನುಪ್ರಕಾಶ್ ಜೂನ್.17ರಂದು ನಿವೃತ್ತರಾಗುವ ಬಿಜೆಪಿ ಪರಿಷತ್ ಸದಸ್ಯರು. ಜೂನ್. 11ರಂದು ಚುನಾವಣೆ ನಡೆಯಲಿದ್ದು 11 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ನಿರಾಯಾಸವಾಗಿ ಬಿಜೆಪಿ ಗೆಲ್ಲಲಿದೆ.
ಸಿ.ಎಂ.ಇಬ್ರಾಹಿಂ ಹಾಗೂ ಕೆ. ಗೋವಿಂದರಾಜು ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಭೈರತಿ ಸುರೇಶ್ ಈಗಾಗಲೇ ಹೆಬ್ಬಾಳ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.
ಮೋಟಮ್ಮ ಹಾಗೂ ಎಂ.ಆರ್.ಸೀತಾರಾಂ ಕಾಂಗ್ರೆಸ್'ನಿಂದ ನಿವೃತ್ತರಾಗುವ ಇನ್ನುಳಿದ ಸದಸ್ಯರು. ಜೆಡಿಎಸ್‌ನಿಂದ ಸೈಯದ್ ಮುದೀರ್ ಆಗಾ ಅವರು ಸಹ ನಿವೃತ್ತಿರಾಗಲಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 78, ಬಿಜೆಪಿ 104,ಜೆಡಿಎಸ್‌ 37 ಸದಸ್ಯರನ್ನು ಹೊಂದಿದೆ.

Add Asianetnews Kannada as a Preferred SourcegooglePreferred