ಬೆಂಗಳೂರು[ಸೆ. 06]  ಬಿಜೆಪಿ ಕೋರ್ ಕಮಿಟಿ ಸಭೆಯಿಂದ ಸಚಿವ ಆರ್. ಅಶೋಕ್ ದೂರ ಉಳಿದಿದ್ದಾರೆ. ಅಶೋಕ್ ಹೊರತುಪಡಿಸಿ ಉಳಿದ ಎಲ್ಲಾ ಕೋರ್ ಕಮಿಟಿ ಸದಸ್ಯರು ಸಭೆಗೆ ಹಾಜರಾಗಿದ್ದರು. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಗುರುವಾರ ಅಶೋಕ್ ನಿವಾಸಕ್ಕೆ  ತೆರಳಿದ್ದರು.  ಗುರುವಾರ ನಡೆದಿದ್ದ ಬೆಂಗಳೂರು ಮಹಾನಗರ ಕೋರ್ ಕಮಿಟಿ ಸಭೆಯಲ್ಲಿ  ಅಶೋಕ್ ಭಾಗವಹಿಸಿದ್ದರು. ಆದರೆ ಇಂದು ನಡೆದ ರಾಜ್ಯ ಕೋರ್ ಕಮಿಟಿ ಸಭೆಗೆ ಕಂದಾಯ ಸಚಿವರು ಗೈರಾಗಿದ್ದಾರೆ.

ಗಣೇಶೋತ್ಸವಕ್ಕೆ ಗಣಪತಿ ಕೂರಿಸಲು ಬಾಂಡ್ ಪಡೆಯುವ ಸರ್ಕಾರದ ಕ್ರಮಕ್ಕೆ ಕೋರ್ ಕಮಿಟಿ ಸಭೆಯಲ್ಲೇ ವಿರೋಧ ವ್ಯಕ್ತವಾಯಿತು. ಸರ್ಕಾರದ ಕ್ರಮಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀವ್ರ ಬೇಸರ. ನಮ್ಮದೇ ಸರ್ಕಾರ ಇರುವಾಗ ಈ ಕ್ರಮ ಎಷ್ಟು ಸರಿ ಎಂದ ಕೋರ್ ಕಮಿಟಿ ಸದಸ್ಯರು ಪ್ರಶ್ನೆ ಮಾಡಿದರು.

ರಾಜಕೀಯ ಪ್ರಾಬಲ್ಯ ಸಾಧಿಸಲು ಸಚಿವ ಆರ್. ಅಶೋಕ್ ಸರ್ಕಸ್

ಹಿಂದಿನ ಸರ್ಕಾರ ಮಾಡಿದ ತೀರ್ಮಾನವನ್ನು ನಮ್ಮ ಸರ್ಕಾರದಲ್ಲಿ ಯಾಕೆ ಮುಂದುವರಿಯಬೇಕು..? ಗಣೇಶೋತ್ಸವಕ್ಕೆ ಬಾಂಡ್ ಪಡೆಯುವುದು ಎಷ್ಟು ಸರಿ?  ನಮ್ಮವರೇನು ಗಲಾಟೆ ಮಾಡ್ತಾರಾ? ಈ ಕ್ರಮ ಸರಿಯಲ್ಲ. ತಕ್ಷಣ ಈ ಬಗ್ಗೆ ಗೃಹ ಸಚಿವರಿಗೆ ಮಾತನಾಡಿ ಕ್ರಮವಹಿಸಲು ಸೂಚಿಸಬೇಕು ಎಂದು ಕೇಳಿಕೊಳ್ಳಲಾಯಿತು. ಈ ಚರ್ಚೆ ನಡೆಯುತ್ತಿದ್ದಾಗಲೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆಯಿಂದ ನಿರ್ಗಮಿಸಿದರು.

ನಿಗಮ ಮಂಡಳಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಪರಸ್ಪರ ಚರ್ಚೆಯ ಮೂಲಕವೇ ನೇಮಕಾತಿ ಮಡುವುದುದು ಸೂಕ್ತ  ಎಂಬ ಅಭಿಪ್ರಾಯವೂ ಕೇಳಿಬಂದಿತು.