ಕಳೆದ ಬಾರಿ ರಾಜ್ಯದಲ್ಲಿ ಜಿಮ್ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ತಾಂಜಾನಿಯಾ ಯುವತಿಯ ಪ್ರಕರಣವನ್ನು ಬಿಜೆಪಿ ಎತ್ತಿಕಟ್ಟಿ, ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಎಂದು ಹೇಳಿತ್ತು. ಬಳಿಕ ತಾಂಜಾನಿಯಾ ರಾಯಭಾರಿ ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು, ಎಂದು ಬೃಜೇಶ್ ಕಾಳಪ್ಪ ಹೇಳಿದ್ದಾರೆ.
ಬೆಂಗಳೂರು (ಜ,04): ಬೆಂಗಳೂರು ಲೈಂಗಿಕ ದೌರ್ಜನ್ಯ ಕುರಿತು ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವಾಗ, ಕಾಂಗ್ರೆಸ್ ಮುಖಂಡ ಬೃಜೇಶ್ ಕಾಳಪ್ಪ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಹೆಸರು ಹಾಳು ಮಾಡಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಪ್ರಕರಣದ ಕುರಿತು ಬ್ರಿಜೇಶ್ ಕಾಳಪ್ಪ ಅಸಂಬದ್ಧ ಹೇಳಿಕೆ ನೀಡಿದ್ದಾರೆ.
ಕಳೆದ ಬಾರಿ ರಾಜ್ಯದಲ್ಲಿ ಜಿಮ್ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ತಾಂಜಾನಿಯಾ ಯುವತಿಯ ಪ್ರಕರಣವನ್ನು ಬಿಜೆಪಿ ಎತ್ತಿಕಟ್ಟಿ, ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಎಂದು ಹೇಳಿತ್ತು. ಬಳಿಕ ತಾಂಜಾನಿಯಾ ರಾಯಭಾರಿ ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು, ಎಂದು ಬೃಜೇಶ್ ಕಾಳಪ್ಪ ಹೇಳಿದ್ದಾರೆ.
ಕೆಲ ದಿನಗಳಲ್ಲೇ ಕರ್ನಾಟಕದಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ನಡೆಯಲಿದೆ, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಹುನ್ನಾರ ನಡೆಸಿದೆ, ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್’ನ ಹೆಸರು ಹಾಳು ಮಾಡುವುದರ ಜೊತೆ ಬೆಂಗಳೂರಿಗೂ ಬಿಜೆಪಿಯಿಂದ ಅವಮಾನವಾಗುತ್ತಿದೆ ಎಂದು ಫೇಸ್’ಬುಕ್ ನಲ್ಲಿ ಬೃಜೇಶ್ ಕಾಳಪ್ಪ ಬರೆದುಕೊಂಡಿದ್ದಾರೆ.