ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ

First Published 23, Mar 2018, 7:19 PM IST
BJP Cong Canditates win Rajyasabha Seat
Highlights

ಕರ್ನಾಟಕದಲ್ಲಿ ಜೆಡಿಎಸ್ ಏಜೆಂಟ್ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾರಣ ಮತ ಎಣಿಕೆ ಆರಂಭಗೊಂಡಿಲ್ಲ.

ನವದೆಹಲಿ(ಮಾ.23): ದೇಶಾದ್ಯಂತ ಇಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿ ಹಾಗೂ ಟಿಎಂಸಿಯ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, ಟಿಎಂ'ಸಿ ನಾಯಕ ರಂಜನ್ ಬಿಸ್ವಾಸ್ ಹಾಗೂ ಛತ್ತೀಸ್'ಘಡ್'ನಿಂದ ಬಿಜೆಪಿ ಅಭ್ಯರ್ಥಿ ಸರೋಜ್ ಪಾಂಡೆ, ಉತ್ತರಪ್ರದೇಶದಿಂದ ಆರ್ಥಿಕ ಸಚಿವ ಅರುಣ್ ಜೇಟ್ಲಿ ವಿಜಯ ಸಾಧಿಸಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್ ಏಜೆಂಟ್ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾರಣ ಮತ ಎಣಿಕೆ ಆರಂಭಗೊಂಡಿಲ್ಲ. ಉತ್ತರಪ್ರದೇಶದಲ್ಲಿ ಕೂಡ ಬ್ಯಾಲೆಟ್ ಪತ್ರಗಳಿಗೆ ಸಂಬಂಧಿಸಿದಂತೆ ದೂರು ಬಂದ ಹಿನ್ನಲೆಯಲ್ಲಿ ಮತ ಎಣಿಕೆಗೆ ಅಧಿಕಾರಿಗಳು ಅನುಮತಿ ನೀಡಿಲ್ಲ. ಒಟ್ಟು 16 ರಾಜ್ಯಗಳಿಂದ 58 ಸ್ಥಾನಗಳಿಗೆ ಮತದಾನ ನಡೆದಿದೆ.

loader