Asianet Suvarna News Asianet Suvarna News

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಸಿಲಿಕಾನ್ ಸಿಟಿಯಲ್ಲಿ ಕೋಳಿ ತಿನ್ನೋ ಮುನ್ನ ಎಚ್ಚರ ಎಚ್ಚರ..!

ಇನ್ನು ಹಕ್ಕಿಜ್ವರ ಪ್ರಕರಣ ದೃಢವಾಗುತ್ತಿದ್ದಂತೆ ಬಿಬಿಎಂಪಿ ಹಾಗೂ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ದಾಸರಹಳ್ಳಿಯ ಕೆಜಿಎನ್ ಅಂಗಡಿಗೆ ತೆರಳಿ ತಪಾಸಣೆ ನಡೆಸಿದರು. ದಾಸರಹಳ್ಳಿ ಸುತ್ತಮುತ್ತಲಿನ ವಲಯದಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಚಿಕನ್ ಸೆಂಟರ್‌'ಗಳನ್ನ ಮುಚ್ಚಿಸಲಾಗಿದೆ. ಜೊತೆಗೆ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೋಳಿಗಳನ್ನ ಮಾರಾಟ ಮಾಡದಂತೆ ಸೂಚಿಸಲಾಗಿದೆ.

Bird Flue Found in Bengaluru

ಬೆಂಗಳೂರು(ಜ.03): ಬಾಯಿಗೆ ರುಚಿ ನೀಡೋ ಚಿಕನ್ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋಳಿಗಳಿಗೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದರಿಂದ ಜನರು ಭಯ ಭೀತರಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಸಿಲಿಕಾನ್‌ ಸಿಟಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ತಮಿಳುನಾಡಿನಿಂದ ಬಂದಂತಹ ನಾಟಿ ಕೋಳಿಗಳಲ್ಲಿ ಹೆಚ್‌1ಎನ್‌5 ಇರೋದು ಪತ್ತೆಯಾಗಿದೆ. ಯಲಹಂಕ ವಲಯದ ಹೆಬ್ಬಾಳ ದಾಸರಹಳ್ಳಿಯಲ್ಲಿರುವ ಕೆಜಿಎನ್‌ ಚಿಕನ್‌ ಸೆಂಟರ್‌'ಗೆ ತಮಿಳುನಾಡಿನಿಂದ ಕೋಳಿಗಳನ್ನ ತರಿಸಲಾಗಿತ್ತು.ಆದರೆ, 15 ಕೋಳಿಗಳ ಪೈಕಿ ನಾಲ್ಕೈದು ಕೋಳಿಗಳು ಅನುಮಾನಾಸ್ಪಾದವಾಗಿ ಸಾವನ್ನಪ್ಪಿದ್ದರಿಂದ ಚಿಕನ್ ಸೆಂಟರ್ ಮಾಲೀಕರು ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆ ಬಳಿಕ ಕೋಳಿಗಳಲ್ಲಿ ಹೆಚ್1 ಎನ್5 ಸೋಂಕು ಇರೋದು ಪತ್ತೆಯಾಗಿದೆ..

ಇನ್ನು ಹಕ್ಕಿಜ್ವರ ಪ್ರಕರಣ ದೃಢವಾಗುತ್ತಿದ್ದಂತೆ ಬಿಬಿಎಂಪಿ ಹಾಗೂ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ದಾಸರಹಳ್ಳಿಯ ಕೆಜಿಎನ್ ಅಂಗಡಿಗೆ ತೆರಳಿ ತಪಾಸಣೆ ನಡೆಸಿದರು. ದಾಸರಹಳ್ಳಿ ಸುತ್ತಮುತ್ತಲಿನ ವಲಯದಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಚಿಕನ್ ಸೆಂಟರ್‌'ಗಳನ್ನ ಮುಚ್ಚಿಸಲಾಗಿದೆ. ಜೊತೆಗೆ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೋಳಿಗಳನ್ನ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಸದ್ಯ ಇರುವ ಕೋಳಿಗಳನ್ನ ಸುಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆದೇಶ ಬೇಕಿದ್ದು, ಅನುಮತಿ ಕೋರಲಾಗಿದೆ.

ಹಕ್ಕಿಜ್ವರ ಕಾಣಿಸಿಕೊಂಡಿರುವ ಬಗ್ಗೆ ಇಂದು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು, ಸೋಂಕು ಹರಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಹಕ್ಕಿ ಜ್ವರಕಾಣಿಸಿಕೊಂಡಿದ್ದು ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Follow Us:
Download App:
  • android
  • ios