Asianet Suvarna News Asianet Suvarna News

ಪ್ರವಾಹ ನೀರಲ್ಲಿ ಟಿಕ್‌ಟಾಕ್; ಕೊಚ್ಚಿ ಹೋದ ಯುವಕ!

ಟಿಕ್‌ಟಾಕ್ ವಿಡಿಯೋ ಮಾಡದೆ ನಿದ್ದೆ ಬರಲ್ಲ ಅನ್ನೋ ಪರಿಸ್ಥಿತಿಗೆ ಇಂದಿನ ಯುವ ಪೀಳಿಗೆ ಬಂದು ತಲುಪಿದೆ. ಟಿಕ್‌ಟಾಕ್ ವಿಡಿಯೋ ಅವಾಂತರಗಳು ಕಣ್ಣ ಮುಂದಿದ್ದರೂ ಗೀಳು ಕಡಿಮೆಯಾಗಿಲ್ಲ. ಇದೀಗ ಪ್ರವಾಹ ನೀರಲ್ಲಿ ಟಿಕ್‌ಟಾಕ್ ಮಾಡಿ ಸಾಹಸ ಪ್ರದರ್ಶಿಸಲು ಮುಂದಾಗ ಯುವಕ ಸಾವನ್ನಪ್ಪಿದ್ದಾನೆ.
 

Bihar boy dies in flood water while doing tiktok video
Author
Bengaluru, First Published Jul 27, 2019, 5:49 PM IST
  • Facebook
  • Twitter
  • Whatsapp

ಬಿಹಾರ(ಜು.27):  ಈಗಿನ ಪೀಳಿಗೆಯ ಯುವ ಜನಾಂಗಕ್ಕೆ ಅದೆಷ್ಟರ ಮಟ್ಟಿಗೆ ಟಿಕ್‌ಟಾಕ್‌ ವಿಡಿಯೋ ಹುಚ್ಚಿದೆ ಎಂದರೆ, ಹೊಸದಾಗಿ ಏನೇ ಕಂಡರೂ ಅದರ ಮುಂದೆ ಒಂದು ಸೆಲ್ಫೀ ಹಾಗೂ ಒಂದು ಟಿಕ್‌ಟಾಕ್‌ ವಿಡಿಯೋ ಮಾಡೋಕೆ ಶುರುವಿಟ್ಟುಕೊಳ್ತಾರೆ. ಟಿಕ್‌ಟಾಕ್ ವಿಡಿಯೋ ವೇಳೆ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಇಷ್ಟಾದರೂ ಟಿಕ್‌ಟಾಕ್ ಮಾತ್ರ ಕಡಿಮೆಯಾಗಿಲ್ಲ. ಇದೀಗ ಪ್ರವಾಹದ ನೀರಿನಲ್ಲಿ ಟಿಕ್‌ಟಾಕ್ ವಿಡಿಯೋ ಮಾಡಲು ಹೋದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

ಇದನ್ನೂ ಓದಿ: ಪುಟಾಣಿ ಟಿಕ್‌ಟಾಕ್ ಸ್ಟಾರ್ ಇನ್ನಿಲ್ಲ: ಅಭಿಮಾನಿಗಳ ಕಂಬನಿಗೆ ಕೊನೆಯಿಲ್ಲ!

ಬಿಹಾರದಲ್ಲಿ ಸುರಿಯುತ್ತಿರವ ಸತತ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಧರ್ಬಾಂಗ್ ಜಿಲ್ಲೆಯಲ್ಲಿ ಪ್ರವಾಹ ಹರಿವು ಹೆಚ್ಚಿದೆ. ಇದೇ ಪ್ರವಾಹದ ನೀರಿನಲ್ಲಿ ಟಿಕ್‌ಟಾಕ್ ವಿಡಿಯೋ ಮಾಡಲು ಅದ್ಲಾವ್‌ಪುರ ಗ್ರಾಮದ ಅಫ್ಜಲ್‌ ಎಂಬಾತ ನಿರ್ಧರಿಸಿದ್ದಾನೆ. ಇದಕ್ಕಾಗಿ ಸ್ನೇಹಿತರ ಜೊತೆ ಧರ್ಬಾಂಗ್‌ಗೆ ತೆರಳಿದ ಅಫ್ಜಲ್‌ ಪ್ರವಾದ ನೀರಿನಲ್ಲಿ ಟಿಕ್‌ಟಾಕ್ ವಿಡಿಯೋ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಪ್ರವಾಹದ ಹರಿವು ಹೆಚ್ಚಾಗಿದ್ದ ಕಾರಣ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

 

ಇದನ್ನೂ ಓದಿ: ಟಿಕ್ ಟಾಕ್ ದುರಂತ : ನೋಡ ನೋಡುತ್ತಿದ್ದಂತೆ ಕೆರೆಯಲ್ಲಿ ಮುಳುಗಿ ಯುವಕ ಸಾವು

ಜೊತೆಗಿದ್ದ ಸ್ನೇಹಿತರು ಅಸಹಾಯಕರಾಗಿ ನೋಡಬೇಕಾಯಿತು. ಅಫ್ಜಲ್‌‌ನನ್ನು ರಕ್ಷಣೆ ಮಾಡೋ ಯಾವುದೇ ಪರಿಸ್ಥಿತಿ ಅಲ್ಲಿರಲಿಲ್ಲ. ನೋಡ ನೋಡುತ್ತಿದ್ದಂತೆ ಅಫ್ಜಲ್‌ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. 

 

Follow Us:
Download App:
  • android
  • ios