ತಿರುವನಂತಪುರಂ(ಜು.27): ಕೇರಳದ ಜನಪ್ರಿಯ ಟಿಕ್‌ಟಾಕ್ ಸ್ಟಾರ್ 9 ವರ್ಷದ ಆರುಣಿ ಕುರುಪ್ ಮೃತಪಟ್ಟಿದ್ದಾಳೆ. ಮೆದುಳು ಸಂಬಂಧಿ ರೋಗದಿಂದ ಬಳಲುತ್ತಿದ್ದ ಆರುಣಿ, ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ತನ್ನ ಮುದ್ದಾದ ಮಾತುಗಳಿಂದಲೇ ಕೇರಳಿಗರ ಜನರ ಮನಸೂರೆಗೊಂಡಿದ್ದ ಆರುಣಿ, ಟಿಕ್‌ಟಾಕ್ ವಿಡಿಯೋ ಮೂಲಕ ಕೇರಳದ ಸ್ಟಾರ್ ಆಗಿ ಹೊರಹೊಮ್ಮಿದ್ದಳು.

ಆದರೆ ಗುರುತಿಸಲಾಗದ ಮೆದುಳು ಸಂಬಂಧಿ ರೋಗಕ್ಕೆ ತುತ್ತಾಗಿದ್ದ ಆರುಣಿ, ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ SIT ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇನ್ನು ಆರುಣಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ಆಕೆಯ ಅಭಿಮಾನಿಗಳು, ಆರುಣಿ ತನ್ನ ವಿಡಿಯೋಗಳಿಂದ ಕೇರಳಿಗರ ಮನದಲ್ಲಿ ಜೀವಂತವಾಗಿರಲಿದ್ದಾಳೆ ಎಂದು ಕಂಬನಿ ಮಿಡಿದಿದ್ದಾರೆ.