ಹೈದರಾಬಾದ್ [ಜು.12] : ಟಿಕ್ ಟಾಕ್ ವಿಡಿಯೋಗಳು ಈಗಾಗಲೇ ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಇದ್ದು, ತೆಲಂಗಾಣದಲ್ಲಿಯೂ ವಿಡಿಯೋ ಮಾಡುವ ವೇಳೆ ಯುವಕನೋರ್ವ ಪ್ರಾಣ ಕಳೆದುಕೊಂಡ ದುರಂತವೊಂದು ನಡೆದಿದೆ.

ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಕೆರೆಯಲ್ಲಿ ಮುಳುಗಿ 24 ವರ್ಷದ ಯುವಕ ಸಾವಿಗೀಡಾಗಿದ್ದಾರೆ. 

ಜಿಹಾದ್‌ ಪ್ರಚೋದನೆ ಆರೋಪ; ಟಿಕ್‌ಟಾಕ್ ನಿಷೇಧಿಸಲು ಮೋದಿಗೆ ಮನವಿ!

ನರಸಿಂಹ ಎನ್ನುವ ಯುವಕ ತನ್ನ ಸಂಬಂಧಿಯೊಂದಿಗೆ ಕೆರೆಗೆ ಈಜಲು ತೆರಳಿದ್ದಾಗ  ಇಬ್ಬರೂ ಕೂಡ ಕೆರೆಗೆ ಇಳಿದಿದ್ದು, ವಿಡಿಯೋ ಮಾಡುತ್ತಿದ್ದರು. ವಿಡಿಯೋಗೆ  ಪೋಸ್ ನೀಡುತ್ತಿದ್ದ ನರಸಿಂಹ ಆಳವಾದ ಜಾಗಕ್ಕೆ ತೆರಳಿ ಜಾರಿ ಬಿದ್ದಿದ್ದಾನೆ.

ಭಾವೀ ಪತ್ನಿ ಜೊತೆ ಧ್ರವ ಸರ್ಜಾ ಟಿಕ್‌ಟಾಕ್; ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ !

ಇಬ್ಬರಿಗೂ ಕೂಡ ಈಜು ಬಾರದ ಕಾರಣ ರಕ್ಷಣೆಗೆ ಕೂಗಿಕೊಂಡರು ಸ್ಥಳದಲ್ಲಿ ಯಾರೂ ಇರದ ಕಾರಣ ಮೇಲೇಳಲಾಗದೇ ನರಸಿಂಹ ಅಲ್ಲಿಯೇ ಮೃತಪಟ್ಟಿದ್ದಾನೆ. 

ನೀರಿನಲ್ಲಿ ಮುಳುಗುವ ಮೊದಲು ಆತ ನೀರಿನಲ್ಲಿ ನೃತ್ಯ ಮಾಡಿದ್ದು, ದೂರ ದೂರ ಹೋಗಿ ಮುಳುಗಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.