ದೇಶದ ಅತೀ ದೊಡ್ಡ ಫರ್ನಿಚರ್ ಮೇಳಕ್ಕೆ ಶುಕ್ರವಾರ ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ. ಸುವರ್ಣ ನ್ಯೂಸ್- ಕನ್ನಡಪ್ರಭ ಪ್ರಾಯೋಜಕತ್ವದ ಈ ಬೃಹತ್ ಪೀಠೋಪಕರಣ ಮತ್ತು ಗೃಹಾಲಂಕಾರ ಮೇಳವನ್ನುಸ್ಯಾಂಡಲ್'ವುಡ್ ನಟಿ ರಾಧಿಕ ಚೇತನ್ ಉದ್ಘಾಟಿಸಲಿದ್ದಾರೆ.

ಬೆಂಗಳೂರು(ಸೆ.15): ದೇಶದ ಅತೀ ದೊಡ್ಡ ಫರ್ನಿಚರ್ ಮೇಳಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ.

ಸುವರ್ಣ ನ್ಯೂಸ್- ಕನ್ನಡಪ್ರಭ ಪ್ರಾಯೋಜಕತ್ವದ ಈ ಬೃಹತ್ ಪೀಠೋಪಕರಣ ಮತ್ತು ಗೃಹಾಲಂಕಾರ ಮೇಳವನ್ನುಸ್ಯಾಂಡಲ್'ವುಡ್ ನಟಿ ರಾಧಿಕ ಚೇತನ್ ಉದ್ಘಾಟಿಸಲಿದ್ದಾರೆ.

ನಾಳೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆರಂಭವಾಗುವ ಈ ಮೇಳವು ಸೋಮವಾರದವರೆಗೆ (ಸೆ.18) ನಡೆಯಲಿದೆ.

ಮೇಳದಲ್ಲಿ ದೇಶದ ವಿವಿದೆಡೆಯಿಂದ ಖ್ಯಾತ ಫರ್ನಿಚರ್ ತಯಾರಕರು, ಮಾರಾಟಗಾರರು ಹಾಗೂ ವಿನ್ಯಾಸಗಾರರು ಪಾಲ್ಗೊಳಲಿದ್ದಾರೆ.

ಅಲಂಕಾರಿಕ ವಸ್ತುಗಳಿಂದ ಹಿಡಿದು, ಗೃಹಾಲಂಕಾರದ ದೀಪಗಳು, ಕಾರ್ಪೆಟ್'ಗಳು, ಫರ್ನಿಚರ್'ಗಳು ಹೀಗೆ ಎಲ್ಲಾ ಬಗೆಯ ವಸ್ತುಗಳ ಬೃಹತ್ ಸಂಗ್ರಹ , ಪ್ರದರ್ಶನ ಹಾಗೂ ಮಾರಾಟವು, ಗ್ರಾಹಕರಿಗೆ ವಿಭಿನ್ನ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ.