ಕನ್ನಡ, ಹಿಂದಿ ನಂತರ ಈಗ ತಮಿಳು ಹಾಗೂ ತೆಲುಗಿನಲ್ಲಿಯೂ ಬಿಗ್'ಬಾಸ್ ಆರಂಭವಾಗುತ್ತಿದೆ.
ಕಿರುತೆರೆಯಲ್ಲಿ ಅತೀ ಹೆಚ್ಚು ಮನರಂಜನೆ ನೀಡುವ ರಿಯಾಲಿಟಿ ಶೋಗಳಲ್ಲಿ ಬಿಗ್'ಬಾಸ್ ಸಹ ಪ್ರಮುಖವಾದುದು.ಇಂಗ್ಲಿಷ್'ನಿಂದ ಭಾರತಕ್ಕೆ ಮೊದಲು ಹಿಂದಿಯಲ್ಲಿ ಬಂದ ಅತೀ ಹೆಚ್ಚು ಜನಪ್ರಿಯತೆ ಪಡೆದು ಈಗಾಗಲೇ 10 ಆವೃತ್ತಿಗಳನ್ನು ಮುಗಿಸಿ 11ನೇ ಆವೃತ್ತಿಗೆ ಕಾಲಿಟ್ಟಿದೆ. ಸುದೀಪ್ ನಡೆಸಿಕೊಡುವ ಕನ್ನಡ ಬಿಗ್'ಬಾಸ್ ಸಹ ಹೆಚ್ಚು ಜನಪ್ರಿಯವಾಗಿದ್ದು 4 ಸೀಸನ್'ಗಳನ್ನು ಮುಗಿಸಿದ್ದು ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶೃತಿ ಹಾಗೂ ಪ್ರಥಮ್ ವಿಜೇತರಾಗಿದ್ದಾರೆ.
ಕನ್ನಡ, ಹಿಂದಿ ನಂತರ ಈಗ ತಮಿಳು ಹಾಗೂ ತೆಲುಗಿನಲ್ಲಿಯೂ ಬಿಗ್'ಬಾಸ್ ಆರಂಭವಾಗುತ್ತಿದೆ. ತಮಿಳಿನಲ್ಲಿ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ನಿರೂಪಕನಾದರೆ ತೆಲುಗಿನಲ್ಲಿ ಜೂನಿಯರ್ ಎನ್'ಟಿ'ಆರ್ ಆ್ಯಂಕರ್ ಆಗುತ್ತಿದ್ದಾರೆ. ಸೃಜನಶೀಲತೆಯಲ್ಲಿ ತಮಿಳಿಗಿಂತ ತೆಲುಗಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಪ್ರೋಮೊವನ್ನು ವಿಭಿನ್ನ ರೀತಿಯಲ್ಲಿ ಶೂಟ್ ಮಾಡಿ ಯೂಟ್ಯೂಬ್'ಗೆ ಬಿಡುಗಡೆ ಮಾಡಲಾಗಿದೆ.
ಪ್ರೋಮೊ ವಿಡಿಯೋದಲ್ಲಿ ಜ್ಯೂನಿಯರ್ ಎನ್'ಟಿ'ಆರ್ ಎದ್ದೇಳಿದಾಗ ಆತನ ಸುತ್ತಲು ಕ್ಯಾಮರಾಗಳಿರುತ್ತವೆ. ಇದನ್ನು ನೋಡಿ ಜ್ಯೂನಿಯರ್'ಗೆ ಫುಲ್ ಶಾಕಾಗುತ್ತದೆ. ಹಾಗೆ ನಿರೂಪಕನನ್ನೇ ಯಾಮಾರಿಸುವ ರೀತಿಯಲ್ಲಿರುವ ಪ್ರೋಮೊ ವೀಕ್ಷಕರನ್ನು ಮನರಂಜಿಸುತ್ತದೆ. ಇನ್ನು ಕೆಲವೇ ದಿನಗಳಲ್ಲಿ 'ಮಾ' ಟೀವಿಯಲ್ಲಿ ಈ ಶೋ ಶುರುವಾಗಲಿದ್ದು, ಭಾಷಾವಾರು ಟಿಆರ್'ಪಿಯಲ್ಲಿ ಈ ಕಾರ್ಯಕ್ರಮ ಪೈಪೋಟಿ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

