ಒಳ್ಳೆ ಹುಡುಗ ಪ್ರಥಮ್  ತಪ್ಪು  ಎಸಗಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಜಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳ ಸ್ನೇಹಿತ ಕಮ್ ಸಿನೆಮಾ ನಿರ್ದೇಶಕ  ಲೋಕಲ್​​ ಲೋಕಿ ಮೇಲೆ ಪ್ರಥಮ್ ಹಲ್ಲೆ ಮಾಡಿರುವ ಆರೋಪ ಎದುರಾಗಿದೆ. ಈ ಬಗ್ಗೆ  ನಿರ್ದೇಶಕ ಲೋಕಿ ದೂರು ದಾಖಲಿಸಿದ್ದಾರೆ.

ಬೆಂಗಳೂರು(ಎ.05): ಒಳ್ಳೆ ಹುಡುಗ ಪ್ರಥಮ್ ತಪ್ಪು ಎಸಗಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಜಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳ ಸ್ನೇಹಿತ ಕಮ್ ಸಿನೆಮಾ ನಿರ್ದೇಶಕ ಲೋಕಲ್​​ ಲೋಕಿ ಮೇಲೆ ಪ್ರಥಮ್ ಹಲ್ಲೆ ಮಾಡಿರುವ ಆರೋಪ ಎದುರಾಗಿದೆ. ಈ ಬಗ್ಗೆ ನಿರ್ದೇಶಕ ಲೋಕಿ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪ್ರಥಮ್ ಸೆಲ್ಫೀ ವೀಡಿಯೋವನ್ನು ಪ್ರಶ್ನಿಸಿ ಲೋಕಿ ಫೇಸ್ ಬುಕ್ ನಲ್ಲೊಂದು ಸೆಲ್ಫೀ ಅಪ್ ಲೋಡ್ ಮಾಡಿದ್ದರು. ಈ ವೇಳೆ ಲೋಕಿಗೆ ಕರೆ ಮಾಡಿದ ಪ್ರಥಮ್ ವೀಡಿಯೋ ಡಿಲೀಟ್ ಮಾಡಿಸಿ ನಂತರ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಳಿಕ ಸ್ನೇಹಿತ ಲೋಕಿಯನ್ನ ಕುರುಬರಹಳ್ಳಿ ಸರ್ಕಲ್'ನಲ್ಲಿ ಭೇಟಿ ಮಾಡುವಂತೆ ಪ್ರಥಮ್​ ಹೇಳಿದ್ದಾನೆ. ಅದರಂತೆ ಲೋಕಿ ನಿನ್ನೆ ರಾತ್ರಿ 11.30ರ ಸುಮಾರಿಗೆ ಸ್ಥಳಕ್ಕೆ ತೆರಳುತ್ತಿದ್ದಂತೆ ಕಾರಿನಿಂದ ಇಳಿದ ಪ್ರಥಮ್ ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹೀಗಂತಾ ಲೋಕಲ್​​ ಲೋಕಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೇಸ್'ಬುಕ್ ಲೈವ್'ನಲ್ಲಿ ಹೇಳಿದ್ದೇನು?

ಇದಾದ ಬಳಿಕ ಒಳ್ಳೆ ಹುಡುಗ ಪ್ರಥಮ್​ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್​ ಮಾಡಿದ ಲೈವ್ ಚಾಟ್ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ವಿಡಿಯೋದಲ್ಲಿ 'ಈ ವಿಚಾರವಾಗಿ ​ನಾನು ಮಾನಸಿಕವಾಗಿ ತುಂಬಾ ನೊಂದಿದ್ದೇನೆ, ಡಿಸ್ಟರ್ಬ್ ಆಗಿದ್ದೇನೆ. ಇನ್ನು ನನ್ನ ಕೈಯಲ್ಲಿ ಬದುಕುವುದಕ್ಕೆ ಆಗುವುದಿಲ್ಲ ನನಗೆ ಸಹಾಯ ಮಾಡಿ ಎಲ್ಲರಿಗೂ ನಾನು ಚಿರಋಣಿ ಎಂದಿರುವ ಪ್ರಥಮ್​ ಫೇಸ್​ಬುಕ್​ನಲ್ಲಿ ತನ್ನ ಅಳಲನ್ನ ತೋಡಿಕೊಂಡಿದ್ದಾರೆ.

ಈ ಹಿಂದೆ ಪ್ರಥಮ್​ ಮಾತನಾಡಿದ್ದ ವಿಡಿಯೋವನ್ನು ಲೋಕೇಶ್​ ಅಪ್'​ಲೋಡ್​ ಮಾಡಿದ್ದರು. ಈ ವಿಚಾರವಾಗಿ ಪ್ರಥಮ್​ ಮತ್ತು ಸ್ನೇಹಿತ ಲೋಕೇಶ್​ ನಡುವೆ 3 ದಿನಗಳ ಹಿಂದೆ ಜಗಳವಾಗಿತ್ತು. ಇದರಿಂದ ನೊಂದಿದ್ದ ಪ್ರಥಮ್​ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.