ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷವು 'ಪ್ರಾಯಶ್ಚಿತ ಯಾತ್ರೆ' ಎಂದು ವ್ಯಂಗ್ಯವಾಡಿ ಬ್ಯಾನರ್‌ಗಳನ್ನು ಹಾಕುವ ಮೂಲಕ ತಿರುಗೇಟು ನೀಡಿದೆ. ಈ ರಾಜಕೀಯ ಸಂಘರ್ಷವು ಇದೀಗ ರಾಮನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಮನಗರ (ಜು.7): ಬಿಡದಿ ಟೌನ್‌ಶಿಪ್ ಯೋಜನೆ(Bidadi township plan)ಯನ್ನು ವಿರೋಧಿಸಿ ಜೆಡಿಎಸ್(JDS) ಪಕ್ಷ ಆಗಸ್ಟ್ 9, 10 ಮತ್ತು 11 ಮೂರು ದಿನಗಳ ಕಾಲ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ 38 ಕಿಮೀ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಕೂಡ ಜೆಡಿಎಸ್‌ ಪಾದಯಾತ್ರೆಗೆ ಕೌಂಟರ್ ನೀಡಲಾರಂಭಿಸಿದೆ.

ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ:

ಜೆಡಿಎಸ್ ನಡೆಯಲಿರುವ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದ್ದು, 'ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ' ಎಂದು ಬರೆದಿರುವ ಬ್ಯಾನರ್ ನನ್ನು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಯುವ ಹಾಕುವ ಮೂಲಕ ಜೆಡಿಎಸ್‌ ಕೌಂಟರ್ ನೀಡಿದ್ದಾರೆ.

ಜೆಡಿಎಸ್ ಆರಂಭಿಸಲಿರುವ ಬಿಡದಿ ಬೈರಮಂಗಲ ಕ್ರಾಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬ್ಯಾನರ್ ಅಳಡಿಸಿದ್ದು, ಹೆಚ್‌ಡಿಕೆ ಬಿಎಸ್‌ವೈ ತಮ್ಮ ಪುತ್ರರ ಕೈ ಹಿಡಿದುಕೊಂಡು ಪಾದಯಾತ್ರೆ ನಡೆಸುವ ರೀತಿ ವ್ಯಂಗ್ಯ ಮಾಡಲಾಗಿದೆ.ಬಿಡದಿ ಟೌನ್‌ಶಿಪ್ ರೂವಾರಿಗಳಾದ ಜೆಡಿಎಸ್ ಬಿಜೆಪಿಯವರ ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಸದ್ಯ ಎರಡು ಕಡೆಯ ಕಾರ್ಯಕರ್ತರು ಸೋಶಿಯಲ್ ಮೀಡಿಯಾ ಬಳಸಿಕೊಂಡು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.