ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಎ.ಕಾಳೇನಹಳ್ಳಿ ಯುವಕನ ಶಿರಚ್ಚೇದನ ಮಾಡಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹಾಸನ(ಸೆ.01): ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಎ.ಕಾಳೇನಹಳ್ಳಿ ಯುವಕನ ಶಿರಚ್ಚೇದನ ಮಾಡಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆಗಸ್ಟ್ 28ರಂದು ಕಬ್ಬಿನಗದ್ದೆಯಲ್ಲಿ ನವಿನ್ ಎಂಬ ವ್ಯಕ್ತಿಯ ರುಂಡ-ಮುಂಡವನ್ನ ಅನಿಲ್ ಎಂಬುವನು ಬೇರ್ಪಡಿಸಿ ಮುಂಡವನ್ನ ಸ್ಥಳದಲ್ಲೇ ಬಿಟ್ಟು ರುಂಡವನ್ನ ತೆಗೆದುಕೊಂಡು ಹೋಗಿದ್ದ ಭಯಾನಕ ಘಟನೆಯೊಂದ್ದು ನಡೆದಿತ್ತು. ಇನ್ನು ಪ್ರಕರಣವನ್ನ ಬೆನ್ನಟಿದ್ದ ಪೊಲೀಸರಿಗೆ ನಿನ್ನೆ ಆರೋಪಿ ಅನಿಲ್ ಎಂಬುವನ್ನ ಸುಳಿವು ಸಿಕ್ಕಿದೆ, ಇದನ್ನ ಬೆನ್ನಟ್ಟಿ ಆರೋಪಿ ನವೀನ್'ನನ್ನು ಹಿಡಿಯಲು ಪೊಲೀಸರು ಬೆನ್ನಟ್ಟಿದ್ದಾಗ ಚನ್ನರಾಯಪಟ್ಟಣದ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ನವೀನ್ ಲಾರಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.
ಇನ್ನು ಈ ಎಲ್ಲಾ ಘಟನೆಗೆ ಅನಿಲ್ ಜೊತೆ ಎಂಗೇಜ್ ಮೆಂಟ್ ಆಗಿದ್ದ ಯುವತಿಗೆ ನವೀನ್ ಮೆಸೇಜ್ ಮಾಡುತ್ತಿದ್ದು, ಸಲುಗೆಯಿಂದ ವರ್ತಿಸುತ್ತಿದ್ದನಂತೆ. ಇದನ್ನು ಸಹಿಸಲಾಗದೆ ಅನಿಲ್, ನವೀನ್ ಶಿರಚ್ಚೇದನ ಮಾಡಿದ್ದ ಎಂದು ತಿಳಿದುಬಂದಿದೆ.
