ಗೌರಿ ಲಂಕೇಶ್ ಹತ್ಯೆ ನಡೆದ ಸ್ವಲ್ಪ ಸಮಯದಲ್ಲೇ ಗ್ಲೋಬಲ್ ಕಾಲೇಜ್ ಬಳಿ ಆತನ ಮೊಬೈಲ್ ಸ್ವಿಚ್ ಆನ್ ಆಗಿ ಮತ್ತೆ ಸ್ವಿಚ್ ಆಫ್ ಆಗಿದೆ.
ಬೆಂಗಳೂರು(ಸೆ.11): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ ಮಹತ್ವದ ಸುಳಿವೊಂದು ಸಿಕ್ಕಿದೆ. ತನಿಖೆ ಚುರುಕುಗೊಳಿಸಿದ ಎಸ್'ಐಟಿ ಪೊಲೀಸರು ಹಂತಕನ ಜಾಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜರಾಜೇಶ್ವರಿನಗರದಲ್ಲಿ ವಶಪಡಿಸಿಕೊಂಡಿದ್ದ ಸಿಸಿ ಕ್ಯಾಮರ ದೃಶ್ಯ ಪರಿಶೀಲಿಸಿದ ಎಸ್'ಐಟಿಗೆ ಹಂತಕನ ಕುರಿತು ಮಹತ್ವದ ಸುಳಿವು ಸಿಕ್ಕಿದೆ. 3 ತಿಂಗಳಿಂದ ಆರ್.ಆರ್. ನಗರದಲ್ಲಿನ ಗೌರಿ ಲಂಕೇಶ್ ಮನೆ ಸುತ್ತ ಅನುಮಾನ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮಾನಾಸ್ಪದವಾಗಿ ತಿರುಗಾಡುವುದಲ್ಲದೇ ಆತನ ಮೊಬೈಲ್'ನ್ನ ಪದೇ ಪದೇ ಸ್ವಿಚ್ ಆಫ್, ಆನ್ ಮಾಡುವುದು ಸ್ವಿಚ್ ಆಫ್ ಮಾಡುವುದು ಮಾಡಿದ್ದಾನೆ.
ಗೌರಿ ಲಂಕೇಶ್ ಹತ್ಯೆ ನಡೆದ ಸ್ವಲ್ಪ ಸಮಯದಲ್ಲೇ ಗ್ಲೋಬಲ್ ಕಾಲೇಜ್ ಬಳಿ ಆತನ ಮೊಬೈಲ್ ಸ್ವಿಚ್ ಆನ್ ಆಗಿ ಮತ್ತೆ ಸ್ವಿಚ್ ಆಫ್ ಆಗಿದೆ. ಈತನ ಅನುಮಾನಸ್ಪದ ನಡವಳಿಕೆ ಗ್ಲೋಬಲ್ ಕಾಲೇಜ್ ಸಮೀಪದ ಸಿಸಿ ಕ್ಯಾಮರವೊಂದರಲ್ಲಿ ಸೆರೆಯಾಗಿದೆ. ಹಂತಕನ ಬೆನ್ನತ್ತಿದ ಎಸ್'ಐಟಿ ಅಧಿಕಾರಿಗಳು ಆಂಧ್ರ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.
