ಡಿವೈಎಸ್ಪಿ ಗಣಪತಿ ಆತ್ಮಹತ್ಯೆ  ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ. ಗಣಪತಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯೆಯಿಂದ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ. ಗಣಪತಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯೆಯಿಂದ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಮಡಿಕೇರಿ ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ಶೈಲಜಾ ಅವರು ಸಿಬಿಐ ಅಧಿಕಾರಿಗಳ ಎದುರು ಸ್ಫೋಟಕ ಸಂಗತಿ ಬಾಯ್ಬಿಟ್ಟಿದ್ದಾರೆ. ಸರ್ಕಾರದ ಸೂಚನೆಯಂತೆಯೇ ಮರಣೋತ್ತರ ಪರೀಕ್ಷೆ ನಡೆದಿತ್ತು ಎಂದು ವೈದ್ಯೆಯು ಹೇಳಿದ್ದು, ಗಣಪತಿ ಮರಣೋತ್ತರ ಪರೀಕ್ಷೆಯಲ್ಲಿ ಸರ್ಕಾರದ ಹಸ್ತಕ್ಷೇಪ ಬಹಿರಂಗವಾಗಿದೆ.

‘ಸರ್ಕಾರದ ಸೂಚನೆಯಂತೆ ನಾನು ಮರಣೋತ್ತರ ಪರೀಕ್ಷೆ ನಡೆಸಿದ್ದೇನೆ, ಆತ್ಮಹತ್ಯೆ ಪ್ರಕರಣ ಎಂದು ಮರಣೋತ್ತರ ಪರೀಕ್ಷೆ ನಡೆಸುವಂತೆ ಸರ್ಕಾರ ಸೂಚಿಸಿತ್ತು, ಎಂದು ಸಿಬಿಐ ಅಧಿಕಾರಿಗಳ ಮುಂದೆ ಡಾ. ಶೈಲಜಾ ಹೇಳಿದ್ದಾರೆ ಎಂದು ಸುವರ್ಣನ್ಯೂಸ್’ಗೆ ಸಿಬಿಐ ಮೂಲಗಳು ತಿಳಿಸಿವೆ.