ವಿಲ್ಲಪುರಂ(ತಮಿಳುನಾಡು): ಕೇರಳದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅನೇಕರು ಪ್ರವಾಹ ಸಂತ್ರಸ್ಥರ ನೆರವಿಗೆ ನಿಂತಿದ್ದಾರೆ. ಇದೀಗ ಪುಟ್ಟ ಬಾಲಕಿಯೋರ್ವಳು ನೀಡಿದ ಸಹಕಾರ ಎಲ್ಲೆಡೆ ವೈರಲ್ ಆಗಿದೆ. 

ತಮಿಳುನಾಡಿನ ವಿಲ್ಲುಪುರಂನ ಅನುಪ್ರಿಯಾ (9) ಎಂಬ ಬಾಲಕಿ ಸೈಕಲ್‌ ಖರೀದಿಸಬೇಕೆಂದು 4 ವರ್ಷದಿಂದ ತಾನು ಕೂಡಿಟ್ಟ 9000 ರು.ಹಣವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ಕೊಡುಗೆಯಾಗಿ ನೀಡಿದ್ದಾಳೆ. 

ಆಕೆಯ ಈ ಮನೋಭಾವ ಭಾರೀ ವೈರಲ್‌ ಆಗುತ್ತಿದ್ದಂತೆ ಹೀರೋ ಸಂಸ್ಥೆ ಅನುಪ್ರಿಯಾಗೆ ಉಚಿತವಾಗಿ ಸೈಕಲ್‌ ವಿತರಿಸುವ ಮೂಲಕ ಆಕೆಯ ಸಂತಸವನ್ನು ಇಮ್ಮಡಿಗೊಳಿಸಿದೆ.