ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ನಿಗದಿಪಡಿಸಿದ್ದ ಸಾಂಕೇತಿಕ ಬೆಲೆಯನ್ನು ಬಡಜನರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಶುಲ್ಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು (ಡಿ.27): ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ನಿಗದಿಪಡಿಸಿದ್ದ ಸಾಂಕೇತಿಕ ಬೆಲೆಯನ್ನು ಬಡಜನರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಶುಲ್ಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 94-ಸಿ ಮತ್ತು 94-ಸಿಸಿ ಅನ್ವಯ ರೂಪಿಸಲಾಗಿದ್ದ ಸಾಂಕೇತಿಕ ಬೆಲೆಗಳನ್ನು ತಗ್ಗಿಸಲು ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ 30-40 ಚದರ ಅಡಿಗೆ ರೂ.1000, 40-60 ಚದರ ಅಡಿಗೆ 2000 ಹಾಗೂ 50-80 ಚದರ ಅಡಿಯ ನಿವೇಶನಗಳಿಗೆ ರೂ. 3000 ಗಳಿಗೆ ಪರಿಷ್ಕರಿಸಲು ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಈ ಮೊದಲು ಕ್ರಮವಾಗಿ ರೂ. 2, 4 ಹಾಗೂ ರೂ.8000 ವನ್ನು ವಿಧಿಸಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ (ಬಿಬಿಎಂಪಿ ಹೊರತುಪಡಿಸಿ) 20-30 ಚದರ ಅಡಿಗೆ 5 ಸಾವಿರ ರೂಗಳಿಗೆ ಪರಿಷ್ಕರಿಸಿದ್ದು, ಪರಿಶಿಷ್ಟರು ಹಾಗೂ ಅಂಗವಿಕಲರಿಗೆ 2 ಸಾವಿರಗಳಿಗೆ ಇಳಿಸಲಾಗಿದೆ. ಈ ಮೊದಲು ರೂ. 10 ಸಾವಿರ ನಿಗದಿಪಡಿಸಲಾಗಿತ್ತು ಎಂದು ವಿವರಿಸಿದರು.