ಬಿಗ್ ಬಾಸ್ ಎಂದರೆ ನೆನಪಾಗುವುದು ವಿವಾದಗಳು, ಮನೆಯೊಳಗೆ ನಡೆಯುವ ಜಗಳ. ಈಗಾಗಲೇ ಕನ್ನಡ ಮತ್ತು ಹಿಂದಿಯಲ್ಲಿ ಈ ರಿಯಾಲಿಟಿ ಶೋ ಬಹಳಷ್ಟು ಫೇಮಸ್ ಆಗಿದೆ. ಒಂದೆಡೆ ಈ ಶೋ ನೋಡಲು ಜನರು ಹಾತೊರೆಯುತ್ತಿದ್ದರೆ ಮತ್ತೊಂದೆಡೆ ವಿವಾದಗಳನ್ನು ಸೃಷ್ಟಿಸುವ ಇದನ್ನು ಬ್ಯಾನ್ ಮಾಡಬೇಕು ಎನ್ನುವವರೂ ಇದ್ದಾರೆ. ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋ ತಮಿಳಿನಲ್ಲೂ ಆರಂಭವಾಗಿದೆ.ಆದರೆ ಇಲ್ಲೂ ಆರಂಭದಿಂದಲೇ ವಿವಾದಗಳಿಂದ ಭಾರೀ ಸುದ್ದಿ ಮಾಡಿದೆ ಹೀಗಾಗಿ ಇಲ್ಲಿನ ಸಂಘಟನೆಗಳು ರಿಯಾಲಿಟಿ ಶೋ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ
ಚೆನ್ನೈ(ಜು.13): ಬಿಗ್ ಬಾಸ್ ಎಂದರೆ ನೆನಪಾಗುವುದು ವಿವಾದಗಳು, ಮನೆಯೊಳಗೆ ನಡೆಯುವ ಜಗಳ. ಈಗಾಗಲೇ ಕನ್ನಡ ಮತ್ತು ಹಿಂದಿಯಲ್ಲಿ ಈ ರಿಯಾಲಿಟಿ ಶೋ ಬಹಳಷ್ಟು ಫೇಮಸ್ ಆಗಿದೆ. ಒಂದೆಡೆ ಈ ಶೋ ನೋಡಲು ಜನರು ಹಾತೊರೆಯುತ್ತಿದ್ದರೆ ಮತ್ತೊಂದೆಡೆ ವಿವಾದಗಳನ್ನು ಸೃಷ್ಟಿಸುವ ಇದನ್ನು ಬ್ಯಾನ್ ಮಾಡಬೇಕು ಎನ್ನುವವರೂ ಇದ್ದಾರೆ. ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋ ತಮಿಳಿನಲ್ಲೂ ಆರಂಭವಾಗಿದೆ.ಆದರೆ ಇಲ್ಲೂ ಆರಂಭದಿಂದಲೇ ವಿವಾದಗಳಿಂದ ಭಾರೀ ಸುದ್ದಿ ಮಾಡಿದೆ ಹೀಗಾಗಿ ಇಲ್ಲಿನ ಸಂಘಟನೆಗಳು ರಿಯಾಲಿಟಿ ಶೋ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ
ತಮಿಳಿನಲ್ಲಿ ಆರಂಭವಾದ 'ಬಿಗ್‌ಬಾಸ್' ರಿಯಾಲಿಟಿ ಶೋಗೆ ಹಿಂದು ಮಕ್ಕಳ್ ಕಚ್ಚಿ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದೆ. ಅಶ್ಲೀಲತೆಯ ರಿಯಾಲಿಟಿ ಶೋ ಬ್ಯಾನ್ ಆಗಬೇಕು. ಶೋನಲ್ಲಿ ಸ್ಪರ್ಧಿಗಳು ಅಶ್ಲೀಲವಾಗಿ ಮಾತನಾಡುತ್ತಾರೆ. ಇದೆಲ್ಲ ತಮಿಳು ಸಂಸ್ಕೃತಿಗೆ ವಿರುದ್ಧವಾದುದು. ಇದರಿಂದ 7 ಕೋಟಿ ತಮಿಳರ ಭಾವನೆಗೆ ಧಕ್ಕೆಯಾಗಿದೆ ಅಂತ ಸಂಘಟನೆ ಹೇಳಿದೆ.
ಕಾರ್ಯಕ್ರಮದಲ್ಲಿ ಲಜ್ಜೆಗೇಡಿತನದಿಂದ ವರ್ತಿಸುವ ನಟಿ ನಮಿತಾ ಸೇರಿದಂತೆ ಹಲವು ಸ್ಪರ್ಧಿಗಳನ್ನು ಬಂಧಿಸಬೇಕು. ಶೋ ಆಂಕರ್ ಕಮಲ್ ಹಾಸನ್ ಅವರನ್ನೂ ಬಂಧಿಸಬೇಕು ಅಂತ ‘ಹಿಂದು ಮಕ್ಕಳ್ ಕಚ್ಚಿ' ಸಂಘಟನೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದೆ.
