ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬೆಟ್ಟೆಗೌಡರು ತಾವು ಪಾರದರ್ಶಕತೆಯಿಂದ ಅಡಳಿತ ನಡೆಸುವುದಲ್ಲದೆ, 35 ನಿರ್ದೇಶಕರ ಸಲಹೆಯಂತೆ ಸಂಘವನ್ನು ಮುನ್ನೆಡೆಸುವುದಾಗಿ ಹೇಳಿದ್ದಾರೆ. ಕಳೆದ 3 ವರ್ಷಗಳ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು(ಜ.18): ತೀವ್ರ ಕುತೂಹಲ ಕೆರಳಿಸಿದ್ದ ವಕ್ಕಲಿಗರ ಸಂಘದ ಚುನಾವಣೆಗೆ ತೆರೆ ಬಿದ್ದಿದೆ. ಸಂಘದ ಅಧ್ಯಕ್ಷರ ನೇಮಕಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಅಪ್ಪಾಜಿಗೌಡರ ವಿರುದ್ಧ ವಿರೋಧಿ ಬಣದ ಬೆಟ್ಟೇಗೌಡ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿವಲಿಂಗಯ್ಯ, ಮಹಾದೇವ ಗೌಡ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರಾಮಚಂದ್ರ ಹಾಗೂ ಖಜಾಂಚಿಯಾಗಿ ರಮೇಶ್ ಆಯ್ಕೆಯಾಗಿದ್ದಾರೆ.