ಕಾಡುಮಲ್ಲೇಶ್ವರ ದೇವಾಲಯಕ್ಕೆ ವೀಳ್ಯದೆಲೆ ವರ್ತಕ ಮಲ್ಲಪ್ಪ ಶೆಟ್ಟರು ಕಾರಣಕರ್ತರು. ಅಚಾನಕ್ಕಾಗಿ ಉದ್ಭವಿಸಿದ ಶಿವಲಿಂಗಕ್ಕೆ ದೇವಾಲಯ ನಿರ್ಮಿಸಿದರು. ಕೆರೆ, ಹೆರಿಗೆ ಆಸ್ಪತ್ರೆ, ದಾನ-ಧರ್ಮಗಳಿಂದ ಸಮಾಜಸೇವೆಗೈದ ಶೆಟ್ಟರು ಕೊನೆಗೆ ದಾರಿದ್ರ್ಯದಿಂದ ಮೃತಪಟ್ಟರು. ದುರದೃಷ್ಟವಶಾತ್ ಇಂದು ಅವರ ಕೊಡುಗೆಗಳು ಮರೆತುಹೋಗಿವೆ.
ಬೆಂಗಳೂರಿನಲ್ಲಿ 'ಮಲ್ಲೇಶ್ವರಂ' ಎಂದರೆ ಎಲ್ಲರಿಗೂ ಗೊತ್ತಿರುವ ಏರಿಯಾ. ಮಲ್ಲೇಶ್ವರ ಎಂಬುದು ಒಂದು ಬಡಾವಣೆಯ ಹೆಸರು. ಇಲ್ಲಿ ಇರುವ ಪುರಾತನ ದೇವಾಲಯವಾದ 'ಕಾಡು ಮಲ್ಲೇಶ್ವರ' ಅಥವಾ 'ಮಲ್ಲಿಕಾರ್ಜುನ ದೇವಸ್ಥಾನ'ದ ಕಾರಣಕ್ಕೆ ಇದಕ್ಕೆ ಮಲ್ಲೇಶ್ವರ ಎಂಬ ಹೆಸರು ಬಂದಿದೆ. ಈ ಕಾಡು ಮಲ್ಲೇಶ್ವರ ಲಿಂಗ ಉದ್ಭವ ಮೂರ್ತಿ ಎಂಬುದು ವಿಶೇಷ. ಇದು ಯಾವುದೋ ಶಿಲ್ಪಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪದ ಲಿಂಗವಲ್ಲ, ತಾನೇ ತಾನಾಗಿ ಉದ್ಭವಿಸಿದ್ದು!
ಆದರೆ, ಈ ಮಲ್ಲೇಶ್ವರಂನ ಕಥೆ ರೋಚಕವಾಗಿದೆ. ಬಹಳ ಹಿಂದೆ ವೀಲ್ಯದೆಲೆ ಮಲ್ಲಪ್ಪ ಶೆಟ್ಟರು (Mallappa Shetty) ಊರಿಗೆ ಹಿಂತಿರುಗಲಾಗದೇ ಅಲ್ಲಿಯೇ ರಾತ್ರಿ ಒಂದು ಕಡೆ ತಂಗಿದ್ದರು. ಊಟಕ್ಕೆ ಸಿದ್ಧಪಡಿಸಲೆಂದು ಅಲ್ಲಿಯೇ ಇದ್ದ ಎರಡು ಕಲ್ಲುಗಳನ್ನು ಒಂದುಕಡೆ ಇಟ್ಟು ಅದಕ್ಕೆ ಬೆಂಕಿ ಹಚ್ಚಿ ಅನ್ನ ಮಾಡಿಕೊಂಡಿದ್ದರು. ಆದರೆ, ಬೆಂದಿದ್ದ ಅನ್ನ ರಕ್ತದ ಬಣ್ಣಕ್ಕೆ ತಿರುಗಿತ್ತು. ಅದನ್ನು ಕಂಡ ಮಲ್ಲಪ್ಪ ಶೆಟ್ಟರು ಹೆದರಿ ಪ್ರಜ್ಞೆ ತಪ್ಪಿ ಬೀಳ್ತಾರೆ. ಎಚ್ಚರವಾಗಿ ನೋಡಲಾಗಿ ಒಲೆಗೆ ಬಳಸಿದ್ದ ಒಂದು ಕಲ್ಲು ಶಿವಲಿಂಗದ ಆಕಾರ ಪಡೆದುಕೊಂಡಿತ್ತು.
ಗಗನಕ್ಕೇರಿದ ವಿಮಾನ ದರಗಳ ನಡುವೆಯೂ ಮಹಾಕುಂಭ ಮೇಳಕ್ಕೆ ಬೆಂಗಳೂರಿಗರ ದಾಂಗುಡಿ
ತಮ್ಮಿಂದ ನಡೆದ ತಪ್ಪಿನ ಅರಿವಾಗಿ ಮಲ್ಲಪ್ಪ ಶೆಟ್ಟರು ಅಲ್ಲಿಯೇ ದೇವಸ್ಥಾನ ನಿರ್ಮಿಸುತ್ತಾರೆ. ಆ ಸ್ಥಳಕ್ಕೆ ಕೂಡ ಪೌರಾಣಿಕ ಹಿನ್ನೆಲೆ ಇದೆ. ಗೌತಮ ಮಹರ್ಷಿಗೆ ಶಿವ ಅಲ್ಲಿ ಪ್ರತ್ಯಕ್ಷರಾಗಿ ದರ್ಶನ್ ನೀಡಿದ್ದರೆಂದು ಪ್ರತೀತಿ ಇದೆ. ಅಲ್ಲಿ ಮೊದಲು ದೊಡ್ಡ ಕಾಡಿತ್ತು. ಅಲ್ಲಿ ನಿರ್ಮಿಸಲಾದ ಆ ದೇವಸ್ಥಾನಕ್ಕೆ 'ಕಾಡು ಮಲ್ಲೇಶ್ವರ' ಎಂಬ ಹೆಸರು ಬಂತು. ಹೀಗೆ, ಕಾಡುಮಲ್ಲೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಕಾರಣಕರ್ತರು ವೀಳ್ಯದೆಲೆ ವರ್ತಕರಾದ ಮಲ್ಲಪ್ಪ ಶೆಟ್ಟರು.
ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವಾಗ ಕೃಷ್ಣರಾಜಪುರ ದಾಟಿ ಸ್ವಲ್ಪ ದೂರ ಹೋಗುತ್ತಿರುವಂತೆ, ರಸ್ತೆಯಿಂದ ಎರಡೂ ಬದಿಯಲ್ಲಿ ಕಾಣುವಂತೆ ಒಂದು ವಿಶಾಲವಾದ ಕೆರೆಯಿದೆ. ಇದನ್ನು 18ನೆಯ ಶತಮಾನದ ಅಂತ್ಯದ ಕಾಲದಲ್ಲಿ (1890) ಮಲ್ಲಪ್ಪ ಶೆಟ್ಟರು ನಿರ್ಮಾಣ ಮಾಡಿದ್ದಾರೆ, ಕೆಆರ್ ಪುರಂ ದಾಟಿ ವೈಟ್‌ಫೀಲ್ಡ್ ಬಳಿ ಇರುವ ಈ ಕೆರೆಯನ್ನು ಮಲ್ಲಪ್ಪ ಶೆಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ. ಕಷ್ಟವೆಂದು ಮನೆ ಬಾಗಿಲಿಗೆ ಬಂದವರಿಗೆ ಹೇರಳವಾಗಿ ಹಣದ ಸಹಾಯ ಮಾಡಿದ್ದಾರೆ.
ಅಷ್ಟೇ ಅಲ್ಲ, ಇಂದಿನ ವಿಕ್ಟೋರಿಯಾ ಅಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯೊಂದಿಗೆ ವಿಲೀನವಾಗಿರುವ ಬೆಂಗಳೂರಿನ ಮೊಟ್ಟಮೊದಲ ಹೆರಿಗೆ ಆಸ್ಪತ್ರೆ ನಿರ್ಮಿಸಿದ್ದು ಕೂಡ ಈ ಮಲ್ಲಪ್ಪ ಶೆಟ್ಟರೇ ಹೌದು. ಜೊತೆಗೆ, ಹೆರಿಗೆ ಆಸ್ಪತ್ರೆಗೆ ಚಂದಾ ಎತ್ತಿದ ಸಮಯದಲ್ಲಿ 25 ಸಾವಿರ ಬೆಳ್ಳಿ ನಾಣ್ಯಗಳನ್ನು ಸ್ವಂತವಾಗಿ ನೀಡಿ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದರಂತೆ ಮಲ್ಲಪ್ಪ ಶೆಟ್ಟರು.
ದೀಪಿಕಾ ಕಿವಿಯಲ್ಲಿ ರಣವೀರ್ ಯಾಕೆ ಪದೇಪದೇ ಪಿಸುಗುಡ್ತಾರೆ? ಸಿಕ್ಬಿಡ್ತು ಉತ್ತರ...!
ಅಷ್ಟೇ ಅಲ್ಲ, ಹಲವಾರು ಗುಡಿ-ಗೋಪುರಗಳು, ಅನ್ನ ಛತ್ರಗಳು, ಕಾಡು ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹೀಗೆ ಹತ್ತುಹಲವು ಸಾಮಾಜಿಕ-ಧಾರ್ಮಿಕ ಕೆಲಸಗಳನ್ನು ಈ ಶೆಟ್ಟರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಯೇ ಅನ್ನ ದಾಸೋಹ ಇರಲಿ, ಅಲ್ಲಿ ಶೆಟ್ಟರು ಯಥೇಚ್ಛವಾಗಿ ದಾನ ಮಾಡುತ್ತಿದ್ದರು. ಜೊತೆಗೆ, ಬರಗಾಲ, ಕ್ಷಾಮ ಯಾವುದೇ ಬರಲಿ, ತಮ್ಮ ಸಂಪತ್ತನ್ನು ಹೇರಳವಾಗಿ ಖರ್ಚು ಮಾಡುತ್ತಿದ್ದರು.
'ಸ್ವಂತಕ್ಕಾಗಿ ಅಲ್ಪ ಸಮಾಜಕ್ಕಾಗಿ ಅಪಾರ' ಎಂಬ ನೀತಿ ಅನುಸರಿಸುತ್ತಿದ್ದ ಮಲ್ಲಪ್ಪ ಶೆಟ್ಟರು ತಮ್ಮ ಕೊನೆಗಾಲದಲ್ಲಿ ಸರಿಯಾಗಿ ಊಟಕ್ಕೂ ಸಿಗದೇ ಪರದಾಡಿದ್ದರು ಎಂಬ ಸುದ್ದಿ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಬೆಂಗಳೂರಿಗಾಗಿ ಬಹಳಷ್ಟನ್ನು ತ್ಯಾಗ ಮಾಡಿದ್ದ ಶೆಟ್ಟರು ತಮ್ಮ ಕೊನೆಗಾಲದಲ್ಲಿ ಬೀದಿ ಬದಿಯಲ್ಲಿ ಅಸಹಾಯಕತೆಯಿಂದ ನರಳಿ ನರಳಿ ಪ್ರಾಣ ಬಿಟ್ಟಿದ್ದು ಮಾತ್ರ ಘೋರ ದುರಂತ.
2ನೇ ಐಫೋನ್ ಫ್ಯಾಕ್ಟರಿ ಖರೀದಿಸಿದ ಟಾಟಾ ; ಕರ್ನಾಟಕದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ!
ಆದರೆ, ಇಂದು ಬೆಂಗಳೂರಿನಲ್ಲಿರುವ ಅದೆಷ್ಟೋ ಮಂದಿಗೆ ಈ ಮಲ್ಲಪ್ಟ ಶೆಟ್ಟರ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲ ಎಂಬ ಸಂಗತಿಯೇ ಮತ್ತೊಂದು ದುರಂಥ ಕಥೆ! ಗೊತ್ತಿದ್ದವರೂ ಕೂಡ ತಮ್ಮ ಮುಂದಿನ ಪೀಳಿಗೆಗೆ ಹೇಳದೇ ಹೋಗಿದ್ದು, ಇತಿಹಾಸದಲ್ಲಿ ಕರಾರುವಕ್ಕಾಗಿ ದಾಖಲಾಗದೇ ಇರುವುದು ಕೂಡ ಮಹಾ ಅಪರಾಧವೇ ಹೌದು! ಅಂದಹಾಗೆ, ಈ ಮಹಾನ್ ಮಾಹಿತಿ ನೀಡಿದ್ದು 'ನಮ್ಮ ನಂಬಿಕೆ' ಹೆಸರಿನ ಯೂಟ್ಯೂಬ್ ವಾಹಿನಿ.

