ಬೆಂಗಳೂರಿನ ವಿದ್ಯಾರ್ಥಿ ಬ್ಲೂವೇಲ್ ಗೆ ಬಲಿ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 4:12 PM IST
Bengaluru Student Dead Body Found In Belthangady Lake
Highlights

ಬೆಂಗಳೂರಿನ ವಿದ್ಯಾರ್ಥಿಯ ಶವ ಬೆಳ್ತಂಗಡಿಯ ಕೆರೆಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿ ಬ್ಲೂ ವೇಲ್ ಗೆ ಬಲಿಯಾಗಿ  ಶಂಕೆ ವ್ಯಕ್ತವಾಗಿದೆ. 

ಮಂಗಳೂರು:  ಬೆಂಗಳೂರಿನ ವಿದ್ಯಾರ್ಥಿಯೋರ್ವ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ದೊರಕಿದೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಬೆಳ್ತಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಬ್ಲೂ ವೇಲ್ ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಬ್ಲೂ ವೇಲ್ ಟಾಸ್ಕ್  ಪೂರೈಸುವ ಸಲುವಾಗಿ ವಿದ್ಯಾರ್ಥಿ ಬೆಂಗಳೂರಿನಿಂದ ಉಡುಪಿಗೆ ಹೊಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಆತನ ಡೈರಿಯ ಬರಹವೂ ಕೂಡ ಶಂಕೆ ಮೂಡಿಸಿದೆ. 

ಡೈರಿಯಲ್ಲಿ ಜುಲೈ 24, 2018 ರಂದು ಉಡುಪಿಗೆ ಹೋಗುತ್ತೇನೆ‌. 5 ತಿಂಗಳು ಅಲ್ಲಿ ಕೆಲಸ ಮಾಡಬೇಕು  ಎಂದು ಜನವರಿ 01, 2018 ರಲ್ಲಿ ವಿದ್ಯಾರ್ಥಿ ಯಶವಂತ್ ಡೈರಿಯಲ್ಲಿ ಬರೆದಿದ್ದ.  

ಬೆಳ್ತಂಗಡಿಯ ಗುರುವಾಯನಕೆರೆ ಗ್ರಾಮದ ಕೆರೆಯಲ್ಲಿ ಯಶವಂತ್ ಸಾಯಿ ಶವ ಪತ್ತೆಯಾಗಿದ್ದು, ಶಾಲೆಗೆ ಹೋದವನು ಮನೆಗೆ ವಾಪಸಾಗದೇ ಅಲ್ಲಿದಂಲೇ ಉಡುಪಿಗೆ ತೆರಳಿದ್ದನೆನ್ನಲಾಗಿದೆ. 

ದೂರವಾಣಿನಗರದ ಐಟಿಐ ವಿದ್ಯಾಮಂದಿರ್ ಶಾಲೆಯಲ್ಲಿ ಓದುತ್ತಿದ್ದ ಯಶವಂತ್ ಸ್ಕೂಲ್ ಬ್ಯಾಗ್ ಕರೆಯ ಬಳಿಯಲ್ಲಿ ದೊರಕಿದ್ದು, ಮನೆಯಲ್ಲಿ  ತಾವು ಅಡ್ವೆಂಚರ್ ಟ್ರಿಪ್ ಗೆ ಹೋಗುವುದಾಗಿ ಚೀಟಿಯಲ್ಲಿ ಬರೆದಿಟ್ಟಿದ್ದನೆನ್ನಲಾಗಿದೆ.

loader