ಗೂಂಡಾ ಸರ್ಕಾರವನ್ನು ಕೆಳಗಿಳಿಸಿ; ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಬಿಜೆಪಿ ಘೋಷಣೆ

First Published 12, Mar 2018, 11:12 AM IST
Bengaluru Rakshisi Padayatre going on in Dasarahalli
Highlights

ಬೆಂಗಳೂರು ರಕ್ಷಿಸಿ ಪಾದಯಾತ್ರೆ 10 ನೇ ದಿನಕ್ಕೆ ಕಾಲಿಟ್ಟಿದ್ದು ದಾಸರಹಳ್ಳಿ ವಿಧಾನಸಭಾ  ಕ್ಷೇತ್ರದಲ್ಲಿ ಇಂದು ನಡೆಯಲಿದೆ. 

ಬೆಂಗಳೂರು (ಮಾ. 12): ಬೆಂಗಳೂರು ರಕ್ಷಿಸಿ ಪಾದಯಾತ್ರೆ 10 ನೇ ದಿನಕ್ಕೆ ಕಾಲಿಟ್ಟಿದ್ದು ದಾಸರಹಳ್ಳಿ ವಿಧಾನಸಭಾ  ಕ್ಷೇತ್ರದಲ್ಲಿ ಇಂದು ನಡೆಯಲಿದೆ. 

ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ ನೇತೃತ್ವದಲ್ಲಿ  ಪಾದಯಾತ್ರೆ ನಡೆಯುತ್ತಿದೆ. ಪ್ರಮುಖ ಬಿಜೆಪಿ ನಾಯಕರು ಇವರಿಗೆ ಸಾಥ್ ನೀಡಿದ್ದಾರೆ. ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪಾಲ್ಗೊಳ್ಳುವ ಸಾಧ್ಯತೆಯಿದೆ. 

ಗೂಂಡಾ ಸರ್ಕಾರವನ್ನು ಕೆಳಗಿಳಿಸಿ ಎಂದು ಘೋಷಣೆ ಕೂಗುವ ಮೂಲಕ ಪಾದಯಾತ್ರೆ ಆರಂಭಿಸಿದ್ದಾರೆ.  ಸಿದ್ದರಾಮಯ್ಯನವರ ಡೋಂಗಿತನ ಇನ್ನು ಬೆಂಗಳೂರಲ್ಲಿ ನಡೆಯಲ್ಲ. ಲೂಟಿಕೋರ ಸಿದ್ದರಾಮಯ್ಯ, ದರೋಡೆಕೋರ ಸಿದ್ದರಾಮಯ್ಯ ಬೆಂಗಳೂರನ್ನು ಲೂಟಿ ಮಾಡಲು ಬಂದಿದ್ದಾರೆ. ಸಿಎಂ ಹುದ್ದೆಗೆ ಅವರು ನಾಲಾಯಕ್. ನಾವು ಕಾಂಗ್ರೆಸ್ಸನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಆರ್ ಅಶೋಕ್ ಸುವರ್ಣ ಜೊತೆ ಹೇಳಿದ್ದಾರೆ. 

ಬೆಂಗಳೂರಿನ ಜನತೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಬಿಜೆಪಿ ಈ ಪಾದಯಾತ್ರೆಯನ್ನು ನಡೆಸುತ್ತಿದ್ದು, ಜನ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ ಬಿಜೆಪಿ ನಾಯಕರು.  

loader