ಐದು ವರ್ಷಗಳ ವಿಳಂಬದ ನಂತರ, ಬನಶಂಕರಿ ಜಂಕ್ಷನ್‌ನಲ್ಲಿ ವೃತ್ತಾಕಾರದ ಸ್ಕೈವಾಕ್ ನಿರ್ಮಾಣವಾಗಲಿದೆ. ಮೆಟ್ರೋ ನಿಲ್ದಾಣ ಮತ್ತು ಟಿಟಿಎಂಸಿಗೆ ಸಂಪರ್ಕ ಕಲ್ಪಿಸುವ ಈ ಸ್ಕೈವಾಕ್, ೧೫ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ೪೦-೪೫ ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಭೂದೃಶ್ಯ, ವಿಶ್ರಾಂತಿ ತಾಣಗಳು ಮತ್ತು ವಾಣಿಜ್ಯ ಮಳಿಗೆಗಳೂ ಇರಲಿವೆ. ಬಿಎಂಆರ್‌ಸಿಎಲ್ ಟೆಂಡರ್‌ಗಳನ್ನು ಆಹ್ವಾನಿಸಿದೆ.

ಬೆಂಗಳೂರು (ಏ.22): ಬರೋಬ್ಬರಿ ಐದು ವರ್ಷಗಳ ವಿಳಂಬದ ಬಳಿಕ ನಮ್ಮ ಮೆಟ್ರೋ ಕೊನೆಗೂ ಬನಶಂಕರಿ ಜಂಕ್ಷನ್‌ನಲ್ಲಿ ಬಹುಚರ್ಚಿತ ವೃತ್ತಾಕಾರದ ಸ್ಕೈವಾಕ್‌ ನಿರ್ಮಾಣ ಮಾಡಲು ಮುಂದಾಗಿದೆ. ಈ ಬಗ್ಗೆ ಡೆಕ್ಕನ್‌ ಹೆರಾಲ್ಟ್‌ ವಿಸ್ತ್ರತ ವರದಿ ಮಾಡಿದೆ. ರಾಜ್ಯದಲ್ಲಿ ಮೊಟ್ಟಮೊದಲ ವೃತ್ತಾಕಾರದ ಸ್ಕೈವಾಕ್‌ ಇರಾಗಿರಲಿದ್ದು, ಇದರ ನಿರ್ಮಾಣ ಪ್ರಕ್ರಿಯೆಯ ಕೆಲಸಗಳು ಕೂಡ ಆರಂಭವಾಗಿದೆ.

ವೃತ್ತಾಕಾರದ ಸ್ಕೈವಾಕ್ ಬನಶಂಕರಿ ಮೆಟ್ರೋ ನಿಲ್ದಾಣವನ್ನು ಬನಶಂಕರಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರ (ಟಿಟಿಎಂಸಿ) ಜೊತೆ ಸಂಪರ್ಕಿಸುತ್ತದೆ. ಅಧಿಕಾರಿಗಳ ಪ್ರಕಾರ, ಸ್ಕೈವಾಕ್ ನಿರ್ಮಾಣವು ವರ್ಷಾಂತ್ಯದ ವೇಳೆಗೆ ಪ್ರಾರಂಭವಾಗಲಿದ್ದು, 15 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬೆಂಗಳೂರಿನ ಅತ್ಯಂತ ಜನನಿಬಿಡ ಇಂಟರ್‌ಸೆಕ್ಷನ್‌ನಲ್ಲಿ ಒಂದಾದ ಇದು ಪಾದಚಾರಿಗಳಿಗೆ ಸುಲಭವಾದ ನಡಿಗೆ ಅನುಭವವನ್ನು ನೀಡಲಿದೆ

ಈ ಯೋಜನೆಯು ಸಂಪೂರ್ಣ ಇಂಟರ್‌ಸೆಕ್ಷನ್‌ಅನ್ನು ಮರುವಿನ್ಯಾಸ ಮಾಡಲಾಗುತ್ತದೆ ಮರಗಳನ್ನು ತೆಗೆದುಹಾಕುವುದು ಮತ್ತು ಸ್ಕೈವಾಕ್‌ಗೆ ದಾರಿ ಮಾಡಿಕೊಡಲು ಯುಟಿಲಿಟಿ ಲೈನ್‌ಗಳನ್ನು ಸ್ಥಳಾಂತರಿಸುವುದನ್ನು ಒಳಗೊಂಡಿರುತ್ತದೆ.

ಈ ಯೋಜನೆಯು ಬೆಂಗಳೂರಿನಲ್ಲಿ ಎರಡೂ ರಸ್ತೆಗಳಲ್ಲಿ ಭೂದೃಶ್ಯ, ವಿಶ್ರಾಂತಿ ಪಾಡ್‌ಗಳು, ಸ್ಕೈವಾಕ್ ಲೆವಲ್‌ ಮತ್ತು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಒಂದು ರೀತಿಯ ಯೋಜನೆಯಾಗಿದೆ. ಪ್ರಗತಿಯ ಒಂದು ಹೆಜ್ಜೆಯಾಗಿ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಸ್ಕೈವಾಕ್ ಅನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಮಾನದಂಡಗಳನ್ನು ಪೂರೈಸುವ ಕಂಪನಿಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಿದೆ.

ಸ್ಕೈವಾಕ್ ಏಕೆ ಅಗತ್ಯ?: ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಟಿಟಿಎಂಸಿ ನಡುವಿನ ಅಂತರ 200 ಮೀಟರ್ ಆಗಿರುವುದರಿಂದ ಮತ್ತು ಅವುಗಳ ನಡುವೆ ನೇರ ಸಂಪರ್ಕವಿಲ್ಲದ ಕಾರಣ ವೃತ್ತಾಕಾರದ ಸ್ಕೈವಾಕ್ ಅಗತ್ಯವಾಗಿದೆ.

2017 ರಲ್ಲಿ ಮೆಟ್ರೋ ನಿಲ್ದಾಣ ಆರಂಭವಾಗಿದೆ. ಪ್ರಯಾಣಿಕರು ಎರಡು ಸಾರಿಗೆ ಕೇಂದ್ರಗಳ ನಡುವೆ ಇಂಟರ್‌ಚೇಂಜ್‌ ಮಾಡುವ ವೇಳೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸುಮಾರು ಎಂಟು ವರ್ಷಗಳಿಂದ, ಪ್ರಯಾಣಿಕರು ಜನನಿಬಿಡ ರಸ್ತೆಯನ್ನು ದಾಟುತ್ತಿದ್ದಾರೆ, ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಪಾದಾಚಾರಿಗಳನ್ನು ಆಯಾಸಗೊಳಿಸುವುದು ಮಾತ್ರವಲ್ಲದೆ, ವಿಪರೀತ ವಾಹನಗ ಓಡಾಟದಿಂದ ಅಪಾಯಕಾರಿಯೂ ಆಗಿದೆ.

ಯೋಜನೆ ವಿಳಂಬವಾಗಲು ಕಾರಣವೇನು?: ಬಿಎಂಆರ್‌ಸಿಎಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡುವಿನ ಹಣಕಾಸು ಮತ್ತು ನಿರ್ಮಾಣದ ವಿವಾದದಿಂದಾಗಿ ಯೋಜನೆ ವಿಳಂಬವಾಯಿತು. ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವನಾಥ್ ಚವಾಣ್, ಈ ಯೋಜನೆಯನ್ನು ಆರಂಭದಲ್ಲಿ ಬಿಬಿಎಂಪಿ ಕೈಗೆತ್ತಿಕೊಳ್ಳಬೇಕಿತ್ತು, ಆದರೆ ಈಗ ಬಿಎಂಆರ್‌ಸಿಎಲ್ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕೇಳಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ಬಳಿ 3273 ಕೋಟಿ ರೂಪಾಯಿ ವೆಚ್ಚದ ಐಟಿ ಪಾರ್ಕ್‌ ನಿರ್ಮಿಸಲಿರುವ ಟಾಟಾ ರಿಯಾಲ್ಟಿ!

ಯೋಜನೆಯ ವಿವರಗಳು: ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈವಾಕ್ ವೃತ್ತಾಕಾರವಾಗಿದ್ದು, ಇಂಟರ್‌ಸೆಕ್ಷನ್‌ನ ಎಲ್ಲಾ ಮೂಲೆಗಳನ್ನು ಒಳಗೊಂಡ ಇಳಿಜಾರುಗಳನ್ನು ಹೊಂದಿರುತ್ತದೆ. ಇದು 280 ಮೀಟರ್ ಉದ್ದ ಮತ್ತು 6 ಮೀಟರ್ ಅಗಲವನ್ನು ಹೊಂದಿರುತ್ತದೆ. ಯೋಜನೆಯ ಅಂದಾಜು ವೆಚ್ಚ 40-45 ಕೋಟಿ ರೂಪಾಯಿ ಎನ್ನಲಾಗಿದೆ.

Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!