Asianet Suvarna News Asianet Suvarna News

ಇನ್ನು 21 ದಿನಗಳ ಕಾಲ ನಲಪಾಡ್ ಜೈಲಿನಲ್ಲಿ ?

ಈ ಪ್ರಕರಣದಲ್ಲಿ ಜಾಮೀನು ಸಿಗದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರು ವಿರುದ್ಧ ಮುಖ್ಯ ಸಾಕ್ಷ್ಯ ಆಗಿರುವ ವೈದ್ಯಕೀಯ ವರದಿ ಕಠಿಣ ಸ್ವರೂಪವಾಗಲಿದೆ.

Bengaluru Court May Deny Tomorrow also For Nalpad Case

ಬೆಂಗಳೂರು(ಮಾ.04): ಇತ್ತೀಚಿಗೆ ಬೆಂಗಳೂರಿನ ಯುಬಿ ಸಿಟಿಯಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ತಂಡದಿಂದ ದಬ್ಬಾಳಿಕೆ ತುತ್ತಾಗಿರುವ ವಿದ್ವತ್ ಅವರು 21 ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರೆ ಆರೋಪಿಗಳು ಕಾನೂನಾತ್ಮಕವಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ.

ಹೀಗಾಗಿ ಅವರ ಕುಟುಂಬಸ್ಥರು ವಿದ್ವತ್ ಚಿಕಿತ್ಸೆ ಮುಂದುವರೆಸಲು ಯತ್ನಿಸಿದರೆ, ಅವರನ್ನು ಆಸ್ಪತ್ರೆಯಿಂದ ಶೀಘ್ರ ಬಿಡುಗಡೆಯಾಗುವಂತೆ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.ಈ ಪ್ರಕರಣದಲ್ಲಿ ಜಾಮೀನು

ಸಿಗದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರು ವಿರುದ್ಧ ಮುಖ್ಯ ಸಾಕ್ಷ್ಯ ಆಗಿರುವ ವೈದ್ಯಕೀಯ ವರದಿ ಕಠಿಣ ಸ್ವರೂಪವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ವತ್ ಅವರನ್ನು ತ್ವರಿತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಪ್ರಯತ್ನ ನಡೆದಿವೆ ಎನ್ನಲಾಗುತ್ತಿದೆ. ಈಗಾಗಲೇ ವಿದ್ವತ್ ಆಸ್ಪತ್ರೆಯಲ್ಲಿದ್ದು 2 ವಾರ ಆಗಿದ್ದು, ಇನ್ನೊಂದು ವಾರ ಇದ್ದರೆ 21 ದಿನ ಆಗಲಿದೆ.

ಹಲ್ಲೆ ಅಥವಾ ಕೊಲೆ ಯತ್ನ ಕೃತ್ಯಗಳಲ್ಲಿ ಆಸ್ಪತ್ರೆಯಲ್ಲೇ ಗಾಯಾಳು 21 ದಿನ ಚಿಕಿತ್ಸೆ ಪಡೆದರೆ ಪ್ರಕರಣದ ಸ್ವರೂಪ ಬದಲಾಗಲಿದೆ. ಆಗ ಐಪಿಸಿ 326 ರಡಿ ಪ್ರಕರಣ ದಾಖಲಾಗಲಿದ್ದು, ಇದು ಗಂಭೀರ ಅಪರಾದ ಕೃತ್ಯ ಎಂದು ಪರಿಗಣಿತ

ವಾಗುತ್ತದೆ. ಹೀಗಾಗಿ ಗಾಯಾಳು ಮೂರು ವಾರಗಳ ಮುನ್ನ ಆಸ್ಪತ್ರೆಯಿಂದ ಬಿಡುಗಡೆಯಾದರೆ ಆ ಸೆಕ್ಷನ್ ಅನ್ವಯವಾಗುವುದಿಲ್ಲ. ಈಗ ವಿದ್ವತ್ ಮೇಲಿನ ಹಲ್ಲೆ ಕೃತ್ಯ ಸಂಬಂಧ 307 ರಡಿ ಪ್ರಕರಣ ದಾಖಲಾಗಿದೆ. ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಕಾರಣ ಮುಂದಿನ ತನಿಖಾ ಹಂತದಲ್ಲಿ 326 ರಡಿ ಸೆಕ್ಷನ್ ಸೇರಿಸಬಹುದಾಗಿದೆ.

ಇನ್ನೂ ಐಪಿಸಿ 326ರಡಿ ಪ್ರಕರಣದ ದಾಖಲಾದರೆ ಗಾಯಾಳು ಮೇಲೆ ತೀವ್ರ ರೀತಿ ಪೆಟ್ಟಾಗಿದೆ ಎಂದೇ ವೈದ್ಯಕೀಯ ವರದಿ ನೀಡಲಿದ್ದಾರೆ. ಇದರಿಂದ ಆರೋಪಿಗಳ ವಿರುದ್ಧ ಸಾಕ್ಷ್ಯಗಳು ಕಾನೂನಾತ್ಮಕವಾಗಿ ಬಿಗಿಯಾಗಲಿದೆ. ಅಲ್ಲದೆ ಕೃತ್ಯ ಕುರಿತು ತನಿಖಾಧಿಕಾರಿಗಳಿಗೆ ಗಾಯಾಳು ಹೇಳಿಕೆ ನೀಡಿದರೂ ಸಹ ಆತ 21 ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಿದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫರ್ಜಿ ಕೆಫೆಯಲ್ಲಿ ಫೆ.18 ರಂದು ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರು ಗೂಂಡಾಗಿರಿ ನಡೆಸಿದ್ದರು. ಈ ಕೃತ್ಯ ನಡೆದ ಎರಡು ವಾರ ಕಳೆದಿದ್ದು, ಇನ್ನೂ ಕೆಲವು ದಿನ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಿದರೆ ಪ್ರಕರಣವು ಕಾನೂನಾತ್ಮಕವಾಗಿ ಗಂಭೀರ ಸ್ವರೂಪ ಪಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

--

Follow Us:
Download App:
  • android
  • ios