ಪದೇ ಪದೇ ಗ್ರಾಮಸ್ಥರ ಮೇಲೆ ದಾಳಿ ಮಾಡ್ತಿದ್ದ ಕರಡಿಯನ್ನು ಗ್ರಾಮಸ್ಥರೇ ಹೊಡೆದು ಕೊಂದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು(ಎ.04): ಪದೇ ಪದೇ ಗ್ರಾಮಸ್ಥರ ಮೇಲೆ ದಾಳಿ ಮಾಡ್ತಿದ್ದ ಕರಡಿಯನ್ನು ಗ್ರಾಮಸ್ಥರೇ ಹೊಡೆದು ಕೊಂದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಧುಗಿರಿ - ಕೊರಟಗೆರೆ ಮಾರ್ಗ ಮಧ್ಯೆ ಬರುವ ಗ್ರಾಮದಲ್ಲಿ ಈ ಹಿಂದೆ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ಮಾಡಿತ್ತು, ಅಲ್ಲದೇ ಗ್ರಾಮಸ್ಥರ ಮೇಲೆ ಮತ್ತು ಹೊಲಗಳಲ್ಲಿ ದಾಂಧಲೆ ಸೃಷ್ಠಿಸುತ್ತಿತ್ತು, ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ , ಇದರಿಂದ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಇಂದು ವ್ಯಕ್ತಿ ಮೇಲೆರಗಿದ ಕರಡಿಯನ್ನು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ .