ರೆವಿನ್ಯೂ ಇನ್ಸ್'ಪೆಕ್ಟರ್ ಆಗಿದ್ದ ಶ್ರೀನಿವಾಸ್ ಅವರ ಮೇಲೆ ಈ ಹಿಂದೆ ಲೋಕಾಯುಕ್ತ ರೇಡ್ ಆಗಿತ್ತು. ಇದರಿಂದ ಅವರು ಮಾನಸಿಕವಾಗಿ ಬಹಳ ನೊಂದಿದ್ದರು ಎಂದು ಅವರ ಮನೆಯವರು ಹೇಳುತ್ತಾರೆ.

ಬೆಂಗಳೂರು(ಜ. 17): ಬಿಬಿಎಂಪಿ ಕಂದಾಯ ನಿರೀಕ್ಷಕ ಶ್ರೀನಿವಾಸ್ ಅವರು ಸೋಮವಾರ ಸಂಜೆ ಶ್ರೀನರದಲ್ಲಿರುವ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಶ್ರೀನಿವಾಸ್ ಸಾವನ್ನಪ್ಪಿರುವ ಶಂಕೆ ಇದೆಯಾದರೂ ಅವರ ಕುಟುಂಬಸ್ಥರು ಇದನ್ನು ಆತ್ಮಹತ್ಯೆ ಎಂದು ಆರೋಪಿಸಿದ್ಧಾರೆ. ವರ್ಗಾವಣೆಯಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದವರು ಹೇಳಿದ್ದಾರೆ.

ಇದೇ ವೇಳೆ, ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರೆವಿನ್ಯೂ ಇನ್ಸ್'ಪೆಕ್ಟರ್ ಆಗಿದ್ದ ಶ್ರೀನಿವಾಸ್ ಅವರ ಮೇಲೆ ಈ ಹಿಂದೆ ಲೋಕಾಯುಕ್ತ ರೇಡ್ ಆಗಿತ್ತು. ಅದಾದ ಬಳಿಕ ಅವರನ್ನು ವರ್ಗಾವಣೆ ಮಾಡಲಾಯಿತು. ಇದರಿಂದ ಶ್ರೀನಿವಾಸ್ ಅವರು ಮಾನಸಿಕವಾಗಿ ಬಹಳ ನೊಂದಿದ್ದರು ಎಂದು ಅವರ ಮನೆಯವರು ಹೇಳುತ್ತಾರೆ.