Asianet Suvarna News Asianet Suvarna News

ಎಸ್‌ಡಿಪಿಐ ನಾಯಕನ ಹತ್ಯೆ: ಬಂಟ್ವಾಳ ಉದ್ವಿಗ್ನ

ಅಮ್ಮುಂಜೆ ವಲಯದ ಎಸ್‌ಡಿಪಿಐ ಅಧ್ಯಕ್ಷನನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪಕ್ಕದ ಕಲ್ಲಡ್ಕದಲ್ಲಿ ಚೂರಿ ಇರಿತದಿಂದಾಗಿ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿರುವಾಗಲೇ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಜೂ.27ರವರೆಗೆ ಸೆ.144 ಜಾರಿ ಮಾಡಲಾಗಿದೆ.

Bantwal Tense After SDPI Leader Brutally Murdered
  • Facebook
  • Twitter
  • Whatsapp

ಬಂಟ್ವಾಳ: ಅಮ್ಮುಂಜೆ ವಲಯದ ಎಸ್‌ಡಿಪಿಐ ಅಧ್ಯಕ್ಷನನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪಕ್ಕದ ಕಲ್ಲಡ್ಕದಲ್ಲಿ ಚೂರಿ ಇರಿತದಿಂದಾಗಿ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿರುವಾಗಲೇ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಜೂ.27ರವರೆಗೆ ಸೆ.144 ಜಾರಿ ಮಾಡಲಾಗಿದೆ.

ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ ಆಟೋಚಾಲಕರಾಗಿದ್ದ ಅಶ್ರಫ್‌ (35) ಮೃತರು. ಎಂದಿನಂತೆ ಅಶ್ರಫ್‌ ಅವರು ಸ್ಥಳೀಯ ನಿವಾಸಿ ಶೀನಪ್ಪ ಪೂಜಾರಿ ಎಂಬುವರ ಜೊತೆ ಬೆಳಗ್ಗೆ ಬೀಡಿ ಸಂಗ್ರಹಕ್ಕೆಂದು ಹೋಗಿ ವಾಪಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ 5-6 ಮಂದಿ ದುಷ್ಕರ್ಮಿಗಳು ತಲವಾರುಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಅಶ್ರಫ್‌ ತಪ್ಪಿಸಿಕೊಳ್ಳಲು ಶೀನಪ್ಪ ಅವರ ಮನೆಯೊಳಗೆ ಓಡಿ ಹೋದರೂ ಆರೋಪಿಗಳು ಬೆನ್ನಟ್ಟಿಅವರ ಮೇಲೆ ದಾಳಿ ನಡೆಸಿದ್ದಾರೆ. ತಲವಾರುಗಳ ಹೊಡೆತದಿಂದ ಅವರ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಲ್ಲು ತೂರಾಟ, ಕಟ್ಟೆಧ್ವಂಸ: ಅಶ್ರಫ್‌ ಹತ್ಯೆ ಬೆನ್ನಲ್ಲೇ ಬಂಟ್ವಾಳ ತಾಲೂಕಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಜಮಾಯಿಸಿದ್ದ ಉದ್ರಿಕ್ತರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೆಲವೆಡೆ ಅಂಗಡಿ ಮುಂಗಟ್ಟು ಮುಚ್ಚಿಸಲಾಗಿದೆ. ಬೆಂಜಪದವು, ಕುಲಾಯಿಯಲ್ಲಿ ಆಕ್ರೋಶಿತರ ಗುಂಪು ಮನೆಗಳಿಗೆ ಕಲ್ಲು ತೂರಿದ್ದು, ಸಂಘಟನೆಯೊ ಂದರ ಕಟ್ಟೆಯನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ. ಹಂತಕರ ಪತ್ತೆಗೆ 5 ತಂಡಗಳನ್ನು ರಚಿಸಲಾಗಿದೆ.

Follow Us:
Download App:
  • android
  • ios