ಫಾರೂಕ್ ಅಬ್ದುಲ್ಲಾ ಬಂಡುಕೋರರನ್ನು ಸಮರ್ಥಿಸಿದ್ದಾರೆ, ಅವರು ರಾಷ್ಟ್ರ ವಿರೋಧಿಯಾಗಿದ್ದಾರೆ. ಅವರ ತಲೆ ಕಡಿದು ತಂದವರಿಗೆ 1 ಲಕ್ಷ ರೂ. ಕೊಡುವುದಾಗಿ  ಗೋವಿಂದ ಪರಾಶರ್ ಎಂಬ ಭಜರಂಗ ದಳದ ನಾಯಕ ಹೇಳಿದ್ದಾನೆ.

ಆಗ್ರಾ ( ಏ.16): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲೆಕಡಿದವರಿಗೆ ಬಿಜೆಪಿ ನಾಯಕ 11 ಲಕ್ಷ ಬಹುಮಾನ ಘೋಷಿಸಿರುವ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಲೆಯನ್ನು ಕಡಿದು ತಂದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಭಜರಂಗ ದಳ ನಾಯಕನೊಬ್ಬ ಘೋಷಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫಾರೂಕ್ ಅಬ್ದುಲ್ಲಾ ಬಂಡುಕೋರರನ್ನು ಸಮರ್ಥಿಸಿದ್ದಾರೆ, ಅವರು ರಾಷ್ಟ್ರ ವಿರೋಧಿಯಾಗಿದ್ದಾರೆ. ಅವರ ತಲೆ ಕಡಿದು ತಂದವರಿಗೆ 1 ಲಕ್ಷ ರೂ. ಕೊಡುವುದಾಗಿ ಗೋವಿಂದ ಪರಾಶರ್ ಎಂಬ ಭಜರಂಗ ದಳದ ನಾಯಕ ಹೇಳಿದ್ದಾನೆ.

ಕಳೆದ ಹನುಮಾನ್ ಜಯಂತಿಯಂದು ಸಭೆಯೊಂದರಲ್ಲಿ ಪಶ್ಚಿಮ ಬಂಗಾಳದ ಯುವ ಮೋರ್ಚಾ ನಾಯಕ ಯೋಗೀಶ್ ವರ್ಶೆನೆಯ್ 'ಯಾರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದು ತರಿತ್ತಾರೋ ಅವರಿಗೆ 11 ಲಕ್ಷ ಬಹುಮಾನ ನೀಡುತ್ತೇನೆ,’ ಎಂದು ಘೋಷಿಸಿದ್ದನು.

ಕಳೆದ ತಿಂಗಳು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆ ಕಡಿದು ತಂದವರಿಗೆ 2 ಕೋಟಿ ರೂ. ಬಹುಮಾನ ನೀಡಿವುದಾಗಿ ಉಜ್ಜಯಿನಿಯ ಕುಂದನ್ ಚಂದ್ರಾವತ್ ಎಂಬ ಆರೆಸ್ಸೆಸ್ ನಾಯಕನೊಬ್ಬ ಘೋಷಿಸಿ ಬಂಧನಕ್ಕೊಳಗಾಗಿದ್ದನು.