ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ತನ್ನ ರಹಸ್ಯ ಗುಹೆಯಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ಆಡಿಸುತ್ತಿದ್ದ. 28 ದಿನಗಳ ಆಟ ಇದಾಗಿತ್ತು. 6 ಜೋಡಿಗಳನ್ನು ಬಿಗ್‌ಬಾಸ್ ರೀತಿಯ ಮನೆ ರಚಿಸಿ ಇಡಲಾಗಿತ್ತು. ಇದಕ್ಕೆ ಬಾಬಾನೇ ಜಡ್ಜ್ ಆಗಿದ್ದ ಎಂದು ಬಾಬಾನ ಮಾಜಿ ಅಳಿಯ ವಿಶ್ವಾಸ್ ಗುಪ್ತಾ ಆರೋಪಿಸಿದ್ದಾನೆ.

ಚಂಡೀಗಢ(ಸೆ.23): ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ತನ್ನ ರಹಸ್ಯ ಗುಹೆಯಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ಆಡಿಸುತ್ತಿದ್ದ. 28 ದಿನಗಳ ಆಟ ಇದಾಗಿತ್ತು. 6 ಜೋಡಿಗಳನ್ನು ಬಿಗ್‌ಬಾಸ್ ರೀತಿಯ ಮನೆ ರಚಿಸಿ ಇಡಲಾಗಿತ್ತು. ಇದಕ್ಕೆ ಬಾಬಾನೇ ಜಡ್ಜ್ ಆಗಿದ್ದ ಎಂದು ಬಾಬಾನ ಮಾಜಿ ಅಳಿಯ ವಿಶ್ವಾಸ್ ಗುಪ್ತಾ ಆರೋಪಿಸಿದ್ದಾನೆ.

Add Asianetnews Kannada as a Preferred SourcegooglePreferred

‘ಇದರಲ್ಲಿ ಕೊನೆಗೆ ತನ್ನ ಮಾಜಿ ಪತ್ನಿ, ಬಾಬಾನ ತಥಾಕಥಿತ ಸಾಕುಮಗಳು ಹನಿಪ್ರೀತ್ ಕೂಡ ಪಾಲ್ಗೊಂಡಿದ್ದಳು. ಕೊನೆಗೆ ಆಕೆಯೇ ವಿಜೇತಳಾದಳು’ ಎಂದು ವಿಶ್ವಾಸ್ ಹೇಳಿದ್ದಾನೆ. ಇದೇ ವೇಳೆ ನಿಯಮ ಪಾಲಿಸದ ಸ್ಪರ್ಧಾಳುಗಳಿಗೆ ಬಾಬಾ ‘ಶಿಕ್ಷೆ’ ಯನ್ನೂ ನೀಡುತ್ತಿದ್ದ ಎಂದು ಹನಿ ಪ್ರೀತ್‌'ಳ ಮಾಜಿ ಪತಿ ತಿಳಿಸಿದ್ದಾರೆ.