ಷೇರು ಮಾರುಕಟ್ಟೆನಿಯಂತ್ರಣಾ ಸಂಸ್ಥೆ ಸೆಬಿಗೆ ವಿಪ್ರೋ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. 2016ರ ವಿತ್ತೀಯ ವರ್ಷದಲ್ಲಿ 2.17 ಕೋಟಿ ರು. ವೇತನ ಪಡೆದಿದ್ದ ಪ್ರೇಮ್‌ಜಿ, 2017ರ ಹಣಕಾಸು ವರ್ಷದಲ್ಲಿ ಕೇವಲ 79 ಲಕ್ಷ ರು. ವೇತನ ಪಡೆದಿದ್ದಾರೆ.

ಬೆಂಗಳೂರು: ಐಟಿ ಕಂಪನಿಗಳು, ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವ ಬೆನ್ನಲ್ಲೇ, ಇತ್ತೀಚಿಗೆ ಇಸ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಬಾಸ್‌ಗಳು ಕಡಿಮೆ ಸಂಬಳ ತೆಗೆದುಕೊಂಡು, ಉದ್ಯೋಗ ಕಡಿತ ಬಿಡಬೇಕು ಎಂದು ಸಲಹೆ ನೀಡಿದ್ದರು.

ಇದಕ್ಕೆ ಪೂರಕವೆಂಬಂತೆ ವಿಪ್ರೋ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಕಳೆದ ವರ್ಷ ತಮ್ಮ ವೇತನವನ್ನು ಶೇ.63ರಷ್ಟುಭಾರೀ ಕಡಿತಗೊಳಿಸಿದ್ದಾರೆ.

ಷೇರು ಮಾರುಕಟ್ಟೆನಿಯಂತ್ರಣಾ ಸಂಸ್ಥೆ ಸೆಬಿಗೆ ವಿಪ್ರೋ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. 2016ರ ವಿತ್ತೀಯ ವರ್ಷದಲ್ಲಿ 2.17 ಕೋಟಿ ರು. ವೇತನ ಪಡೆದಿದ್ದ ಪ್ರೇಮ್‌ಜಿ, 2017ರ ಹಣಕಾಸು ವರ್ಷದಲ್ಲಿ ಕೇವಲ 79 ಲಕ್ಷ ರು. ವೇತನ ಪಡೆದಿದ್ದಾರೆ.

ಈ ವೇತನವು ದೀರ್ಘಕಾಲೀನ ಲಾಭದಾಯಕವಾಗಿರುವ ಪ್ರಾವಿಡೆಂಟ್‌ ಫಂಡ್‌ ಮತ್ತು ಪಿಂಚಣಿ ಒಳಗೊಂಡಿಲ್ಲ.