ಕೊರೋನಾ ವೈರಸ್ ವೀಕ್ನೆಸ್ ಪತ್ತೆ ಹಚ್ಚಿದ ರಷ್ಯಾ; ಶೇ.99.9 ವೈರಸ್ ನಾಶಕ್ಕಿದೆ ಸುಲಭ ದಾರಿ!
ಕೊರೋನಾ ವೈರಸ್ ನಿಯಂತ್ರಣಕ್ಕೆ ವಿಶ್ವದಲ್ಲಿನ ಹಲವು ದೇಶಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದೆ. ಹಲವು ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಸಂಶೋಧಕರು, ತಜ್ಞ ವೈದ್ಯರ ತಂಡಗಳು ಪ್ರತಿ ದಿನ ಕೊರೋನಾ ವೈರಸ್ ಕುರಿತು ಅಧ್ಯಯನ ನಡೆಸುತ್ತಿದೆ. ಪ್ರತಿ ದಿನ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ. ಇದೀಗ ರಷ್ಯಾ ತಜ್ಞರ ತಂಡ ಕೊರೋನಾ ವೈರಸ್ ವೀಕ್ ಪಾಯಿಂಟ್ ಪತ್ತೆ ಹಚ್ಚಿದ್ದಾರೆ. ಇಷ್ಟೇ ಅಲ್ಲ ವೈರಸ್ ನಾಶಕ್ಕೆ ಸುಲಭ ದಾರಿಯನ್ನು ಕಂಡು ಹಿಡಿದಿದ್ದಾರೆ.
ರಷ್ಯಾ(ಆ.04): ವಿಶ್ವದಲ್ಲಿ ಸುಮಾರು 160 ಸಂಸ್ಥೆಗಳು, ಫಾರ್ಮಾಸಿ ಕೊರೋನಾ ವೈರಸ್ ಲಸಿಕೆ ಪತ್ತೆ ಹಚ್ಚುವಲ್ಲಿ ತಲ್ಲೀನವಾಗಿದೆ. ರಷ್ಯಾ ತಜ್ಞರ ತಂಡ ಬಹುಬೇಗನೆ ಕೊರೋನಾ ವೈರಸ್‌ಗೆ ಔಷಧಿ ಕಂಡು ಹಿಡಿಯಲಾಗಿದೆ ಎಂದು ಘೋಷಿಸಿತ್ತು. ಇದೀಗ ರಷ್ಯಾ ಮತ್ತೊಂದು ಪ್ರಮುಖ ಅಂಶವನ್ನು ಬಯಲು ಮಾಡಿದೆ. ಕೊರೋನಾ ವೈರಸ್‌ಗೆ ಶುಚಿಯಾದ ನೀರೇ ಮದ್ದು ಎಂದಿದೆ.
ಕೊರೋನಾಗೆ ನಂಜನಗೂಡು ಇಂಜೆಕ್ಷನ್ ಬಿಡುಗಡೆ!.
ರಷ್ಯಾದ ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವಿರೋಲಜಿ ಹಾಗೂ ಬಯೋಟೆಕ್ನಾಲಜಿ ಇದೀಗ ಕೊರೋನಾ ವೈರಸ್ ವಿರುದ್ಧ ಹೋರಾಡಲು ಪರಿಣಾಮಕಾರಿಯಾದ ವಿಧಾನವನ್ನು ಕಂಡು ಹಿಡಿದಿದೆ. ಈ ಸಂಸ್ಥೆ ನೀಡಿದ ಅಧ್ಯಯನ ವರದಿ ಪ್ರಕಾರ ಶುಚಿಯಾದ ನೀರು ಕೊರೋನಾ ವೈರಸ್ ತಡೆಯಲು ಸಹಕಾರಿಯಾಗಿದೆ ಎಂದಿದೆ.
ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನದಲ್ಲಿ ಶುಚಿಯಾದ ಹಾಗೂ ಉಗುರು ಬೆಚ್ಚಗಿನ ನೀರಿನಲ್ಲಿ ಕೊರೋನಾ ವೈರಸ್ 25 ಗಂಟೆಯಲ್ಲಿ ಶೇಕಡಾ 90 ರಷ್ಟು ವೈರಸ್ ನಾಶವಾಗಲಿದೆ. ಇನ್ನು 72 ಗಂಟೆಯಲ್ಲಿ ಶೇಕಡ 99.9 ರಷ್ಟು ವೈರಸ್ ನಾಶವಾಗಲಿದೆ. ಇನ್ನು ಬಿಸಿಯಾದ ನೀರಿನಲ್ಲಿ ಕೊರೋನಾ ವೈರಸ್ ಕ್ಷಣಾರ್ಧದಲ್ಲೇ ಸಾಯುತ್ತಿದೆ ಎಂದು ವರದಿ ಹೇಳಿದೆ.
ವರದಿ ಪ್ರಕಾರ ಬಿಸಿ ಬಿಸಿಯಾದ ನೀರು ಕುಡಿಯುವುದರಿಂದ ಕೊರೋನಾ ವೈರಸ್ ದೇಹದಲ್ಲಿ ಮಾಡಬಹುದಾದ ಅನಾಹುತವನ್ನು ತಪ್ಪಿಸಬಹುದು. ಇಷ್ಟೇ ಅಲ್ಲ ಕ್ಲೋರಿನೇಟೆಡ್ ನೀರು ಹಾಗೂ ಸಮುದ್ರದ ನೀರಿನಲ್ಲೂ ಕೊರೋನಾ ವೈರಸ್ ಸಾಯುತ್ತಿದೆ. ಎಂದಿದೆ.
ಅಧ್ಯಯನದ ಹೇಳಿದ ಪ್ರಮುಖ ಅಂಶಗಳಲ್ಲಿ ಬಿಸಿ ನೀರನ್ನು ಸೇವಿಸುತ್ತಾ ಇದ್ದರೆ ಕೊರೋನಾ ವೈರಸ್‌ನ್ನು ನಾಶ ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದಿದೆ.