Asianet Suvarna News Asianet Suvarna News

ನಗರದಲ್ಲಿ ಆಟೋರಿಕ್ಷಾ ಮಿತಿಮೀರಲು ಕಾರಣವೇನು? ಬಯಲಾಯ್ತು ಆಟೋ ಪರ್ಮಿಟ್ ದಂಧೆ

ಹೀಗೆ ಬಡವರ ಹೊಟ್ಟೆ ಮೇಲೆ ಹೊಡೆದು ಅಕ್ರಮ ಪರ್ಮಿಟ್​ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಅಷ್ಟೇ ಅಲ್ಲಾ ಅಕ್ರಮವಾಗಿ ಪರ್ಮಿಟ್​ ಪಡೆದು ಆಟೋ ಚಲಾಯಿಸುತ್ತಿರುವ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕಿದೆ.

autorickshaw permit scam evidence

ಬೆಂಗಳೂರು(ಡಿ. 04): ನಗರದ ಆರ್'​ಟಿಓ ಅಧಿಕಾರಿಗಳ ದಾಖಲಾತಿ ಪ್ರಕಾರ ನಗರದಲ್ಲಿ ಒಟ್ಟು 1.25 ಲಕ್ಷದ ಆಟೋಗಳು ಪರ್ಮೀಟ್​ ಪಡೆದಿವೆ. ಆದ್ರೆ,ಅಸಲಿಗೆ ಬೆಂಗಳೂರಿನಲ್ಲಿ ಇರುವ ಆಟೋಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ. ಇದಕ್ಕೆ ಕಾರಣ ಆರ್'​ಟಿಓ ಅಧಿಕಾರಿಗಳು ಎಂಬುವುದು ನೇರವಾಗಿ ಕಂಡುಬರುತ್ತೆ. ಇದಕ್ಕೆ ಪಕ್ಕಾ ಸಾಕ್ಷ್ಯ ಸುವರ್ಣನ್ಯೂಸ್'ಗೆ ಲಭಿಸಿದೆ. ನಾರಾಯಣಮ್ಮ ಎಂಬುವವರ ಆಟೋ ಪರ್ಮಿಟ್​ ಅವರಿಗೆ ಗೊತ್ತಿಲ್ಲದೆಯೇ ಇನ್ನೊಬ್ಬರ ಹೆಸರಿನಲ್ಲಿ ರಿಜಿಸ್ಟರ್​ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ, ಒಂದೇ ಪರ್ಮಿಟ್​ ಇಬ್ಬರ ಹೆಸರಿನಲ್ಲಿ ಬದಲಾವಣೆ ಮಾಡುವ ಅಕ್ರಮದಲ್ಲಿ ಆರ್'​ಟಿಓ ಅಧಿಕಾರಿಗಳು ಶಾಮೀಲು ಆಗಿದ್ದಾರೆ. ಪರ್ಮಿಟ್ ಪಡೆಯುವಾಗ ಒಂದು ಝೆರಾಕ್ಸ್ ಪ್ರತಿ ಆರ್​'ಟಿಓ ಅಧಿಕಾರಿಗಳ ಬಳಿ ಇರುತ್ತೆ. ಆ ಪ್ರತಿಯನ್ನ ಆರ್'​ಟಿಒ ಅಧಿಕಾರಿ ಬಳಿಯಿಂದ ಪಡೆಯುವ ಖದೀಮರು ಬೇರೋಬ್ಬರ ಹೆಸರಿಗೆ ರಿಜಿಸ್ಟರ್​ ಮಾಡಿಸುತ್ತಾರೆ.

ಹೀಗೆ ಬಡವರ ಹೊಟ್ಟೆ ಮೇಲೆ ಹೊಡೆದು ಅಕ್ರಮ ಪರ್ಮಿಟ್​ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಅಷ್ಟೇ ಅಲ್ಲಾ ಅಕ್ರಮವಾಗಿ ಪರ್ಮಿಟ್​ ಪಡೆದು ಆಟೋ ಚಲಾಯಿಸುತ್ತಿರುವ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕಿದೆ.

- ಮುತ್ತಪ್ಪ ಲಮಾಣಿ, ಸುವರ್ಣನ್ಯೂಸ್

Follow Us:
Download App:
  • android
  • ios