ಮೈಸೂರಿನಲ್ಲಿ  ಮ್ಯೂಸಿಯಂಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ವಯೋವೃದ್ಧೆಯ ಮೇಲೆ  ಹಲ್ಲೆ ನಡೆಸಿದ್ದಾರೆ. ಚಾಮುಂಡಿಬೆಟ್ಟ ರಸ್ತೆಯಲ್ಲಿ ರುವ  ಗೌರಿ ಎಂಬುವವರಿಗೆ ಸೇರಿದ ಸ್ಯಾಂಡ್​  ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ.

ಮೈಸೂರು(ಅ.20): ಮೈಸೂರಿನಲ್ಲಿ ಮ್ಯೂಸಿಯಂಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ವಯೋವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಮುಂಡಿಬೆಟ್ಟ ರಸ್ತೆಯಲ್ಲಿ ರುವ ಗೌರಿ ಎಂಬುವವರಿಗೆ ಸೇರಿದ ಸ್ಯಾಂಡ್​ ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ.

ಕಲಾವಿದೆ ಗೌರಿ ತಾಯಿ ನಾಗಲಾಂಬಿಕೆ ಮೇಲೆ ಹಲ್ಲೆ ನಡೆದಿದೆ. ಸ್ಯಾಂಡ್​ ಮ್ಯೂಸಿಯಂ ಪಕ್ಕದಲ್ಲೇ ಕಾವೇರಿ ಸಿಲ್ಕ್​'ನ ರೇಷ್ಮೆ​ ಉದ್ಯೋಗ ಸೀರೆ ಶೋರೂಂ ಇದೆ. ಮ್ಯೂಸಿಯಂಗೆ ಬರುವ ಪ್ರವಾಸಿಗರನ್ನು ಸೀರೆ ಶೋರೂಂಗೂ ಕಳುಹಿಸುವಂತೆ ಧಮಕಿ ಹಾಕಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಇನ್ನು ಹಲ್ಲೆ ನಡೆಸಿದ ದಾಂಡಿಗರೆಲ್ಲರೂ ವಿಧಾನಪರಿಷತ್​ ಸದಸ್ಯ ಸಂದೇಶ್​ ನಾಗರಾಜ್​ ಬೆಂಬಲಿಗರೆಂದು ಎಂದು ಗೌರಿ ತಾಯಿ ನಾಗಲಾಂಬಿಕೆ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.