ಮುಂಬೈ[ಆ.6] ಸರಿಯಾಗಿ ಅಡಿಗೆ ಮಾಡು  ಅಥವಾ ಮನೆ ಕೆಲಸಗಳನ್ನು ಸರಿಯಾಗಿ ನಿಭಾಯಿಸು ಎಂದು ಗಂಡ ಹೆಂಡತಿಗೆ ಹೇಳಿದರೆ ಅದು ಆಕೆಯನ್ನು ಕೆಟ್ಟದಾಗಿ ನಡೆಸಿಕೊಂಡಂತೆ ಅಲ್ಲ ಎಂದು  ಬಾಂಬೆ ಹೈ ಕೋರ್ಟ್ ತೀರ್ಪು ನೀಡಿದೆ.

ಸಾಂಗ್ಲಿಯ ನಿವಾಸಿಯೊಬ್ಬರ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 17 ವರ್ಷದ ಹಿಂದಿನ ಪ್ರಕರಣದವೊಂದರ ವಿಚಾರಣೆ ವೇಳೆ ಹೀಗೆ ಹೇಳಿದೆ. 17 ವರ್ಷದ ಹಿಂದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಮಹಿಳೆಗೆ ಮಾನಸಿಕ ಹಿಂಸೆ ನೀಡಿ ವಿಷ ಸೇವಿಸುವಂತೆ ಮಾಡಲಾಗಿತ್ತು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು. 

ಆದರೆ ಇದಕ್ಕೆ ಯಾವುದೇ ದಾಖಲೆಯಿಲ್ಲ. ಅಡುಗೆ ಸರಿಯಾಗಿ ಮಾಡು ಎಂಬ ಕಾರಣ ನೀಡಿ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.