ನವದೆಹಲಿ[ಡಿ.24] ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಅಲ್ಪ ಸಂಖ್ಯಾತರನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ತಾವು ತೋರಿಸುತ್ತೇವೆ ಎಂದು ಹೇಳಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ನಟ ನಾಸಿರುದ್ದೀನ್ ಶಾ ತಿರುಗೇಟು ನೀಡಿದ್ದರು.

ಇಮ್ರಾನ್ ಖಾನ್ ಭಾರತದಂತಹ ದೇಶವನ್ನು ಟೀಕೆ ಮಾಡುವ ಬದಲು  ನಿಮ್ಮ ದೇಶದ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ ನಟ ನಾಸಿರುದ್ದೀನ್ ಶಾ ತಿರುಗೇಟು ನೀಡಿದ್ದರು. ಭಾರತದಲ್ಲಿ ನಮ್ಮ ಮಕ್ಕಳ ಭವಿಷ್ಯದದ ಬಗ್ಗೆ ಚಿಂತೆಯಾಗಿದೆ ಎಂದು ಹೇಳಿದ್ದ ನಾಸಿರುದ್ದೀನ್ ಶಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನಕ್ಕೆ ಟಿಕೆಟ್ ಸಹ ಬುಕ್ ಮಾಡಿ ನೀಡಲಾಗಿತ್ತು.

‘ರಾಹುಲ್‌ಗೆ ಮೋದಿ ಸೋಲಿಸುವ ಶಕ್ತಿ ಇಲ್ಲವೇ ಇಲ್ಲ' ಓವೈಸಿ ಮಾತಿನಲ್ಲಿ ಏನು ಅಡಗಿದೆ?

ಆದರೆ ಇಮ್ರಾನ್ ಖಾನ್‌ಗೆ  ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನದ ಸಂವಿಧಾನ ಹೇಳುವಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಮಾತ್ರ ಪಾಕ್ ಅಧ್ಯಕ್ಷರಾಗಲು ಸಾಧ್ಯ. ಆದರೆ ಭಾರತದಲ್ಲಿ ಯಾವ ಸಮುದಾಯಕ್ಕೆ ಸೇರಿದವರು ಆಗಬಹುದು. ಈಗಾಗಲೇ ಅನೇಕ ರಾಷ್ಟ್ರಪತಿಗಳನ್ನು ಕಂಡಿದ್ದೇವೆ. ‘ಖಾನ್ ಸಾಹೇಬರು ಅಲ್ಪಸಂಖ್ಯಾತರ ಹಕ್ಕು ಮತ್ತು ರಾಜಕಾರಣದಲ್ಲಿ ಅವರಿಗೆ ಭಾರತದಲ್ಲಿರುವ ಪ್ರಾಮುಖ್ಯವನ್ನು ಮೊದಲು ಅರಿತುಕೊಳ್ಳಬೇಕು’ ಎಂದು ಕಟುವಾಗಿಯೇ ಟಾಂಗ್ ನೀಡಿದ್ದಾರೆ.