‘ರಾಹುಲ್‌ಗೆ ಮೋದಿ ಸೋಲಿಸುವ ಶಕ್ತಿ ಇಲ್ಲವೇ ಇಲ್ಲ’
ಕಾಂಗ್ರೆಸ್ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಕಷ್ಟ ಸಾಧ್ಯ ಎಂದು ಎಐಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹೈದರಾಬಾದದ್[ಡಿ.12] ಆಲ್ ಇಂಡಿಯಾ ಮಜೀಲ್ಸ್ ಇತ್ತೇದಾಹುಲ್ ಮುಸ್ಲಿಮೀನ್ [ಎಐಐಎಂ] ಅಧ್ಯಕ್ಷ ಅಸಾದುದ್ದೀನ್ ಓವೈಸಿ ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ. ತೆಲಂಗಾಣದ ಫಲಿತಾಂಶದಲ್ಲಿ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಗೆಲುವಿನ ನಗೆ ಬೀರಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಸರಿಯಾದ ಏಟು ನೀಡಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೈದರಾಬಾದ್ ಸಂಸದ ಓವೈಸಿ, 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲುಸಿವ ಶಕ್ತಿ ಕಾಂಗ್ರೆಸ್‌ಗೆ ಇರುವುದು ಅನುಮಾನ ಎಂದು ಹೇಳಿದ್ದಾರೆ.
ಪ್ರಬುದ್ಧರಾದ ರಾಹುಲ್: ಪಪ್ಪುಗೆ ಮೋದಿ ಕಲಿಸಿದ ಪಾಠ ಪ್ರಬುದ್ಧತೆ!
ಟಿಆರ್‌ಎಸ್ ಬಗ್ಗೆಯೂ ಮಾತನಾಡಿದ ಓವೈಸಿ, ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಸ್ಥಾನವನ್ನು ಮುಂದೆ ಪಡೆದುಕೊಳ್ಳಲಿವೆ. ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದ 17 ಸೀಟುಗಳನ್ನು ಟಿಆರ್‌ಎಸ್ ಗೆಲ್ಲಲಿದ್ದು ನಮ್ಮ ಪಕ್ಷ ಬೆಂಬಲವಾಗಿ ನಿಲ್ಲಲ್ಲಿದೆ ಎಂದು ಹೇಳಿದ್ದಾರೆ.
ನಮ್ಮ ಮೇಲೆ ಮತ್ತು ಟಿಆರ್ ಎಸ್ ಮೇಲೆ ಸುಳ್ಳು ಆರೋಪ ಮಾಡಿದವರು ಈಗ ಅನುಭವಿಸುತ್ತಿದ್ದಾರೆ. ರಾಹುಲ್ ಗಾಂಧಿ ಒಮ್ಮೆ ಆತ್ಮಾವಲೋಕಲೋನ ಮಾಡಿಕೊಳ್ಳಲು ಕಾಲ ಬಂದಿದೆ ಎಂದು ಹೇಳಿದ್ದಾರೆ.