ಮುಂಬೈ(ಫೆ.24): ಪುಲ್ವಾಮಾ ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ದಾಳಿಯ ರೂವಾರಿ ಜೈಷ್-ಎ-ಮೊಹ್ಮದ್ ಸಂಘಟನೆಗೆ ಮುಟ್ಟಿ ನೋಡಿಕೊಳ್ಳುವಂತ ಜವಾಬು ನೀಡಿದ್ದಾರೆ.

ಮುಂಬಯಿನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಒವೈಸಿ, ಉಗ್ರ ಮಸೂದ್ ಅಜರ್ ನ ಸಂಘಟನೆ ಹೆಸರು ಜೈಷ್-ಎ-ಮೊಹ್ಮದ್(ಮೊಹ್ಮದ್ ಅವರ ಸೈನ್ಯ) ಅಲ್ಲ ಜೈಷ್-ಎ-ಸೈತಾನ್(ರಾಕ್ಷಸನ ಸೈನ್ಯ) ಎಂದು ಒವೈಸಿ ಗುಡುಗಿದ್ದಾರೆ.

ಪುಲ್ವಾಮಾ ದಾಳಿಯ ಹಿಂದೆ ಪಾಕ್ ಕೈವಾಡವಿದ್ದು, ಅಲ್ಲಿನ ಸರ್ಕಾರ, ಐಎಸ್ ಐ ಹಾಗೂ ಜೆಇಎಂ ಸೇರಿ ಈ ದಾಳಿಯನ್ನು ನಡೆಸಿವೆ ಎಂದು ಒವೈಸಿ ನೇರ ಆರೋಪ ಮಾಡಿದರು.