ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶವನ್ನು ಸುತ್ತಾಡಲಾರಂಭಿಸಿದ್ದಾರೆ. ಅದರಂತೆ ಇಂದು ಮೋದಿ ಮಧುರೈ, ಕೇರಳದ ತ್ರಿಶೂರ್ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ರು. ಆದ್ರೆ ಮೋದಿ ಮುಧುರೈ ಭೇಟಿ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧದ ವಾರ್ ನಡೆದಿದೆ.
ಮಧುರೈ, [ಜ.27]: ಮಧುರೈನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದರು. ಆದ್ರೆ ಪ್ರಧಾನಿ ನರೇಂದ್ರ ಮೋದಿ ಮಧುರೈ ಭೇಟಿ ಹೆಸರಲ್ಲಿ ಟ್ಟಿಟ್ಟರ್ ವಾರ್ ಜೋರಾಗಿಯೇ ನಡೆದಿದೆ.
ಟ್ವಿಟ್ಟರ್ನಲ್ಲಿ ಒಂದು ವರ್ಗ ವೆಲಕಮ್ ಮೋದಿ. ಮಧುರೈ ಥ್ಯಾಂಕ್ಸ್ ಮೋದಿ ಎಂದು ಸ್ವಾಗತಿಸಿದರೆ, ಮತ್ತೊಂದೆಡೆ ಗೋ ಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ಹೆಸರಲ್ಲಿ ಜಟಾಪಟಿ ನಡೆಸಿದ್ದಾರೆ.
‘ಮನ್ ಕಿ ಬಾತ್’ನಲ್ಲಿ ಸಿದ್ದಗಂಗಾ ಶ್ರೀಗಳ ನೆನೆದ ಪ್ರಧಾನಿ!
ಗಜ ಚಂಡಮಾರುತ ಅನಾಹುತವಾದಾಗ ಮೋದಿ ಏಕೆ ಬರಲಿಲ್ಲ..?
ಗಜ ಮಾರುತ ಬಂದಾಗ ನೂರಾರು ಜನ ಸತ್ತರು. ಸಾವಿರಾರು ಜನ ನಿರ್ಗತಿಕರಾದರು. ಅಷ್ಟೇ ಅಲ್ಲದೇ ತೂತುಕುಡಿ ಗಲಾಟೆ ವೇಳೆ ಹತ್ತಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡರು. ಆಗ ಮೋದಿ ಎಲ್ಲಿ ಹೋಗಿದ್ರು? ಬಂದು ನಮ್ಮ ಕಷ್ಟ ಕೇಳಲೇ ಇಲ್ಲ. ಜೊತೆಗ ತಮಿಳುನಾಡು ರೈತರು ದೆಹಲಿಗೆ ಹೋದಾಗ ಮೋದಿ ಭೇಟಿಯಾಗಲಿಲ್ಲ ಏಕೆ? .ಹೀಗಾಗಿ ಬರೋದು ಬೇಡ ಎಂದು ಗೋ ಬ್ಯಾಕ್ ಮೋದಿ ಎಂದು ಆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ರೆ ಇನ್ನೊಂದು ಗುಂಪು, ಎಲ್ಲಾ ಹಂತದಲ್ಲೂ ಕೇಂದ್ರ ಸರ್ಕಾರ ತಮ್ಮ ಕಾರ್ಯವನ್ನೇ ಸಮರ್ಥವಾಗಿ ನಿಭಾಯಿಸಿದೆ. ಈಗ ಮೋದಿ ಬರುತ್ತಿರುವುದು ಅಭಿವೃದ್ಧಿ ಕಾರ್ಯಕ್ಕಾಗಿ. ಹೀಗಾಗಿ ವೆಲಕಮ್ ಮೋದಿ. ಮಧುರೈ ಥ್ಯಾಂಕ್ಸ್ ಮೋದಿ ಹೆಸರಲ್ಲಿ ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ: 100 ರಷ್ಟು ಇವಿಎಂ ತಿರುಚುವ ಸಾಧ್ಯತೆ
ಗೋ ಬ್ಯಾಕ್ ಮೋದಿ ಹ್ಯಾಶ್ಟಾಗ್ ಹೆಸರಲ್ಲಿ 69 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಿದ್ದು, ಇದು ಈ ಟ್ವಿಟ್ಟರ್ ನಲ್ಲಿ ನಂಬರ್ ಒನ್ ಟ್ರೆಂಡ್ ಆಗಿತ್ತು. ಇನ್ನು ಮಧುರೈ ಥ್ಯಾಂಕ್ಸ್ ಮೋದಿ ಹ್ಯಾಶ್ ಟ್ಯಾಗ್ 1 ಲಕ್ಷ 31 ಸಾವಿರಕ್ಕೂ ಹೆಚ್ಚು ಜನ ಟ್ವೀಟ್ ಮಾಡಿದ್ದು, 2 ನೇ ಸ್ಥಾನದಲ್ಲಿತ್ತು ಟ್ರೆಂಡ್ ಆಗಿತ್ತು. ಜತೆಗೆ ತಮಿಳುನಾಡಿನ ಎಂಡಿಎಂಕೆ ಪಾರ್ಟಿ ಕೂಡ ಹೆಸರಲ್ಲಿ ಮಧುರೈನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಮೋದಿ ವಾಗ್ದಾಳಿ
ಮಧುರೈ ನಂತರ ತ್ರಿಶೂರ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಪಿಣರಾಯ್ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಸ್ತಾಪಿಸಿದ ಮೋದಿ, ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಎಲ್ಲರೂ ಗೌರವಿಸಬೇಕು. ಆದ್ರೆ ಕಮ್ಯುನಿಸ್ಟ್ ಸರ್ಕಾರದಿಂದ ನಮ್ಮ ಸಂಸ್ಕೃತಿಯನ್ನೇ ತಿರುಚುವ ಯತ್ನ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
27-28ರಂದು ಪ್ರಧಾನಿಗೆ ಬಂದ ಉಡುಗೊರೆಗಳ ಹರಾಜು!
ಲೋಕಸಮರಕ್ಕೆ ಕೇಸರಿ ಪಾಳೆಯ ಸಜ್ಜು
ಲೋಕಸಮರಕ್ಕೆ ಭರ್ಜರಿ ತಯಾರಿ ನಡೆಸಿರುವ ಕೇಸರಿ ಪಾಳಯ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮೋದಿ ಅಭಿವೃದ್ಧಿ ಕಾರ್ಯ ಹೆಸರಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿವಿಧ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಮುಂದಿನ 2 ತಿಂಗಳಲ್ಲಿ ದೀದಿನಾಡು ಪಶ್ಚಿಮ ಬಂಗಾಳದಲ್ಲಿ 300ಕ್ಕೂ ಹೆಚ್ಚು ರ್ಯಾಲಿ ನಡೆಸಲು ಪ್ಲಾನ್ ಹೆಣೆದಿದ್ದು, ಈ ಮೂಲಕ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಶಾ ಮತ್ತು ಮೋದಿ ಟೀಮ್ ಹಲವು ತಂತ್ರಗಳನ್ನು ರೂಪಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 27, 2019, 8:11 PM IST