ನವದೆಹಲಿ(ಜ.26): ‘ನಾನೊಬ್ಬ ಬರಿಗೈ ಫಕೀರ, ಅಂದುಕೊಂಡ ಕಾರ್ಯ ಸಾಧಿಸಿದ ಮೇಲೆ ನನ್ನ ಜೋಳಿಗೆ ಹೊತ್ತು ಹೊರಟು ನಿಲ್ಲುತ್ತೇನೆ..’ಇದು ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳೀದ್ದ ಮಾತು.

ಅದರಂತೆ ದೇಶದ ಪ್ರಧಾನಿಯಾಗಿ ಕಳೆದ ನಾಲ್ಕುವರೆ ವರ್ಷಗಳ ಕಾಲ ದೇಶಕ್ಕಾಗಿ ಹಗಲಿರುಳು ಚಿಂತಿಸಿದ ಪ್ರಧಾನಿ ಮೋದಿ, ಸ್ವಂತಕ್ಕಾಗಿ ಮಾಡಿದ್ದೇನೂ ಇಲ್ಲ.   

ಇದಕ್ಕೆ ಪುಷ್ಠಿಯಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಉಡುಗೊರೆಗಳನ್ನು ಕೇಂದ್ರ ಸರ್ಕಾರ ಜನವರಿ 27 ಮತ್ತು 28ರಂದು ಸಾರ್ವಜನಿಕವಾಗಿ ಹರಾಜು ಹಾಕಲಿದೆ.

ಕಳೆದ ನಾಲ್ಕುವರೆ ವರ್ಷಗಳಲ್ಲಿ ಪ್ರಧಾನಿ ಮೋದಿಗೆ ನೀಡಿದ ಎಲ್ಲಾ ಉಡುಗೊರೆಗಳನ್ನು ಜನವರಿ 27 ಮತ್ತು 28 ರಂದು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಹರಾಜು ಹಾಕಲಾಗುತ್ತಿದೆ. 

ಇದರಿಂದ ಸಂಗ್ರಹವಾಗುವ ಮೊತ್ತವನ್ನು ಗಂಗಾ ನದಿ ಶುದ್ಧೀಕರಣ(ನಮಾಮಿ ಗಂಗೆ) ಯೋಜನೆಗೆ ಬಳಸಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಡಾ.ಮಹೇಶ್ ಶರ್ಮಾ ತಿಳಿಸಿದ್ದಾರೆ.

ಕಳೆದ ನಾಲ್ಕುವರೆ ವರ್ಷಗಳಲ್ಲಿ ಮೋದಿ ಅವರಿಗೆ 1,900ಕ್ಕೂ ಹೆಚ್ಚು ವಸ್ತುಗಳು, ಸ್ಮರಣಿಕೆಗಳು ಉಡುಗೊರೆ ರೂಪದಲ್ಲಿ ಬಂದಿವೆ. ಇವುಗಳನ್ನು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್ (ಎನ್​ಜಿಎಂಎ)ನಲ್ಲಿ ಇರಿಸಲಾಗಿದೆ. 

ಮೋದಿ ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ತಮಗೆ ಬಂದಿದ್ದ ಉಡುಗೊರೆಗಳನ್ನು 2015ರಲ್ಲಿ ಹರಾಜು ಹಾಕಲಾಗಿತ್ತು. ಇದರಿಂದ ಸಂಗ್ರಹವಾದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗಿತ್ತು.