ಲೋಕಸಭೆಯಲ್ಲಿ ಅನುಮೋದನೆಗೊಂಡ ತೆರಿಗೆ ಕಾಯ್ದೆ ಬಗ್ಗೆ ಅರವಿಂದ್ ಕೇಜ್ರಿವಾಲ್ ತಪ್ಪಾಗಿ ಬಿಂಬಿಸಿದ್ದಾರೆ. ಈಗಲೂ ತೆರಿಗೆ ಮಾಹಿತಿಯನ್ನು ತಪ್ಪಾಗಿ ನೀಡಿದವರಿಗೆ ತೆರಿಗೆ ಕಾಯ್ದೆ ಸೆಕ್ಷನ್ 270 ಎ ಅಡಿಯಲ್ಲಿ ಶೇ.200 ರಷ್ಟು ದಂಡ ವಿಧಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನವದೆಹಲಿ (ನ.30): ಲೋಕಸಭೆಯಲ್ಲಿ ಅನುಮೋದನೆಗೊಂಡ ತೆರಿಗೆ ಕಾಯ್ದೆ ಬಗ್ಗೆ ಅರವಿಂದ್ ಕೇಜ್ರಿವಾಲ್ ತಪ್ಪಾಗಿ ಬಿಂಬಿಸಿದ್ದಾರೆ. ಈಗಲೂ ತೆರಿಗೆ ಮಾಹಿತಿಯನ್ನು ತಪ್ಪಾಗಿ ನೀಡಿದವರಿಗೆ ತೆರಿಗೆ ಕಾಯ್ದೆ ಸೆಕ್ಷನ್ 270 ಎ ಅಡಿಯಲ್ಲಿ ಶೇ.200 ರಷ್ಟು ದಂಡ ವಿಧಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಪ್ಪುಹಣ ಘೋಷಿಸಿದವರ ತೆರಿಗೆ ದಂಡವನ್ನು ಶೇ. 200 ರಿಂದ ಶೇ.10 ಕ್ಕೆ ಇಳಿಸಿರುವುದ್ಯಾಕೆ ಎಂದು ಕೇಜ್ರಿವಾಲ್ ನಿನ್ನೆ ಪ್ರಶ್ನಿಸಿದ್ದರು. ಅದಕ್ಕೆ ಜೇಟ್ಲಿ ಇಂದು ಸ್ಪಷ್ಟನೆ ನೀಡಿದ್ದಾರೆ.
