ಆತ ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
26/11ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ನನ್ನು ಕುತಂತ್ರದಿಂದ ಗೃಹ ಬಂಧನದಿಂದ ಮುಕ್ತಿಗೊಳಿಸಿದ್ದ ಪಾಕ್ಗೆ ಅಮೆರಿಕಾ ಎಚ್ಚರಿಕೆ ನೀಡಿದೆ.
ಸಯೀದ್ನನ್ನು ಗೃಹ ಬಂಧನದಿಂದ ಮುಕ್ತಿ ಮಾಡಬೇಡಿ. ಆತನ ವಿರುದ್ಧ ಕೇಸ್ ದಾಖಲಿಸಿ, ಬಂಧನದಲ್ಲಿಡಬೇಕು ಎಂದು ಅಮೆರಿಕಾ ಸರ್ಕಾರ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ. ಅಲ್ಲದೇ ಆತನ ವಿರುದ್ಧ ದಾಖಲೆ ಸಂಗ್ರಹಿಸಬೇಕು. ಆತ ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬಿಡುಗಡೆಯಾದ ಮರುದಿನವೇ ಉಗ್ರ ಹಫೀಜ್ ಭಾರತದ ವಿರುದ್ಧ ಜಿಹಾದ್ ಮುಂದುವರಿಯಲಿದೇ ಎಂದು ಸೊಕ್ಕು ಪ್ರದರ್ಶಿಸಿದ್ದ. ಜನವರಿಯಿಂದ ಹಫೀಜ್ಗೆ ವಿಧಿಸಿದ್ದ ಗೃಹ ಬಂಧನವನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕ್ನ ಲಾಹೋರ್ ಹೈಕೋರ್ಟ್ ಗೃಹ ಬಂಧನದಿಂದ ಮುಕ್ತಿ ನೀಡಿತ್ತು.
