ನವದೆಹಲಿ(ಸೆ.12): ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿದರೆ, ಆದೇಶವನ್ನು ಪಾಲಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಸೇನಾಧ್ಯಕ್ಷ ಜನರಲ್ ಬಿಪಿನ್ ರಾವತ್ ಸ್ಪಷ್ಟಪಡಿಸಿದ್ದಾರೆ.

ಭಾರತದ ಮುಂದಿನ ಗುರಿ ಪಾಕ್ ಆಕ್ರಮಿತ ಕಾಶ್ಮೀರ ಎಂಬ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜನರಲ್ ರಾವತ್, ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯಗಳನ್ನು ಪಾಲಿಸುವುದು ಭಾರತೀಯ ಸೇನೆಯ ಕರ್ತವ್ಯ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

pok ಮರುವಶ ಕುರಿತು ಕೇಂದ್ರ ಸರ್ಕಾರ ನಿರ್ಣಯ ಕೖಗೊಳ್ಳಬೇಕೆ ಹೊರತು ಸೇನೆಯಲ್ಲ, ಆದರೆ ಸರ್ಕಾರ ಮರುವಶಕ್ಕೆ ಆದೇಶ ನೀಡಿದರೆ ಅದಕ್ಕೆ ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಜನರಲ್ ರಾವತ್ ಸ್ಪಷ್ಟಪಡಿಸಿದರು.